Friday, 31 August 2018

ಅನುಕಂಪದ ಆಧಾರದ ಮೇಲೆ

ಸರ್ಕಾರಿ ಕಾರ್ನರ್‌

Friday, 31.08.2018, 3:00 AM     

ದಿನದ ಪ್ರಶ್ನೆ
ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ನನ್ನ ತಂದೆ ಸೇವೆ ಸಲ್ಲಿಸುತ್ತಿರುವಾಗಲೇ ನಿಧನರಾದರು. ಅವರ ನಿಧನದಿಂದ ಅನುಕಂಪದ ಆಧಾರದ ಮೇಲೆ ವಾಹನ ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಏನಿರಬೇಕು? ಹುದ್ದೆ ನೀಡಲು ಕಾಲಾವಧಿಯ ಮಿತಿ ಎಷ್ಟು?
| ವಿನಯ್ ಮಾ. ನಲವಾಡಿ ಧಾರವಾಡ
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಾವಳಿ ನಿಯಮ 3ರ ಪ್ರಕಾರ ಮೃತ ಸರ್ಕಾರಿ ನೌಕರನ ಪತ್ನಿ ಅಥವಾ ಪುತ್ರ ಅನುಕಂಪದ ಮೇರೆಗೆ ನೇಮಕಾತಿ ಹೊಂದಲು ಅರ್ಹರು. 1977ರ ಸಾಮಾನ್ಯ ನೇಮಕಾತಿ ನಿಯಮಾವಳಿ ನಿಯಮ 9 (1ಎ) ಮೋಟಾರು ವಾಹನ ಚಾಲಕರ ಹುದ್ದೆಗೆ ಪಿಯುಸಿ ಜತೆ ಉತ್ತಮ ದೇಹದಾರ್ಢ್ಯ ಹೊಂದಿದ್ದು, ಆರ್.ಟಿ.ಓ. ಕಚೇರಿಯಿಂದ ವಾಹನ ಚಾಲನೆಯ ಲೈಸೆನ್ಸ್ ಪಡೆದು ಸಲ್ಲಿಸಬೇಕು. ಈ ನೇಮಕಾತಿ ಪ್ರಕ್ರಿಯೆಯನ್ನು ನಾಲ್ಕು ತಿಂಗಳೊಳಗೆ ಪೂರೈಸಬೇಕು. ಈ ಅನುಕಂಪದ ನೇಮಕಕ್ಕೆ ನೀವು ತಂದೆ ನಿಧನರಾದ ದಿನಾಂಕದಿಂದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಬೇಕು.

ಅನುಕಂಪದ ಮೇರೆಗೆ ನೇಮಕಾತಿ

ಸರ್ಕಾರಿ ಕಾರ್ನರ್​

Saturday, 01.09.2018, 3:02 AM      
ನನ್ನ ಸ್ನೇಹಿತನೊಬ್ಬನು ಸರ್ಕಾರಿ ನೌಕರಿಯಲ್ಲಿದ್ದಾಗಲೇ ನಿಧನಹೊಂದಿದ್ದು, ಸದರಿ ಅವರ ಪತ್ನಿಗೆ ಅನುಕಂಪದ ಮೇರೆಗೆ ಅರ್ಜಿಯನ್ನು ತಾಲೂಕು ಪಂಚಾಯಿತಿ ಮೂಲಕ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲಾಗಿದೆ. ಆದರೆ 9ನೇ ತರಗತಿ ಓದಿದ ಅವರ ಪತ್ನಿಗೆ ‘ಡಿ’ ದರ್ಜೆ ನೌಕರಿ ನೀಡಲಾಗುವುದಿಲ್ಲ. ಕನಿಷ್ಠ 10ನೇ ತರಗತಿ ಪಾಸಾಗಬೇಕೆಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದ್ದಾರೆ.
| ಮನೋಹರ್ ಎಂ. ವೇಳಿಪ, ಜೊಯಿಡ, ಉ.ಕ.
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಾವಳಿ ನಿಯಮ 3ರ ಪ್ರಕಾರ ಮೃತ ಸರ್ಕಾರಿ ನೌಕರನ ಪತ್ನಿ ಅಥವಾ ಪುತ್ರ ಅನುಕಂಪದ ಮೇರೆಗೆ ನೇಮಕಾತಿ ಹೊಂದಲು ಅರ್ಹರಾಗಿರುತ್ತಾರೆ. ‘ಡಿ’ ದರ್ಜೆಯ ಹುದ್ದೆಗೆ ಈ ನಿಯಮಾವಳಿಯ ನಿಯಮ 4 (3)ರ ಪ್ರಕಾರ ನಿಗದಿಪಡಿಸಿದರೂ 2017.10.27ರ ಸರ್ಕಾರಿ ಸುತ್ತೋಲೆ ಸಂಖ್ಯೆ ಸಿಆಸುಇ 105, ಸೇಆನೇ 2017ರ ಪ್ರಕಾರ 1996ರ ನಿಯಮಗಳ ನಿಯಮ 4 (3) ಇದ್ದರೂ ಗ್ರೂಪ್ ಡಿ ಹುದ್ದೆಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಪರಿಗಣಿಸುವಲ್ಲಿ ವಿದ್ಯಾರ್ಹತೆಗೆ ವಿನಾಯಿತಿ ನೀಡಲಾಗಿದೆ. ಹೀಗಾಗಿ ಈ ಸುತ್ತೋಲೆ ಅನ್ವಯ ಮತ್ತೊಮ್ಮೆ ಅನುಕಂಪದ ಮೇರೆಗೆ ನೇಮಕಕ್ಕೆ ಜಿಲ್ಲಾ ಪಂಚಾಯಿತಿಗೆ ಪುನರ್ ಮನವಿ ಸಲ್ಲಿಸಬಹುದು. 

Thursday, 30 August 2018

ರಜೆ ಸೌಲಭ್ಯದ ನಿಯಮಗಳು

*ರಜೆ ಸೌಲಭ್ಯದ ನಿಯಮಗಳು*

 ರಜೆಯನ್ನು ಗೃಹಕೃತ್ಯಕ್ಕಾಗಿ ಅಥವಾ ವೈದ್ಯಕೀಯ ಕಾರಣಗಳಿಗಾಗಿ ಮಂಜೂರು ಮಾಡಬಹುದು.

ಗೃಹಕೃತ್ಯಕ್ಕಾಗಿ ಬಳಸಿಕೊಂಡ ಅಸಾಧಾರಣ ರಜೆ ಅವಧಿಯನ್ನು ನಿವೃತ್ತಿ ವೇತನ ಲೆಕ್ಕಾಚಾರಕ್ಕೆ ಅರ್ಹ ಸೇವೆಯಾಗಿ ಪರಿಗಣಿಸಬಹುದು.

ಮಂಜೂರಾದ ರಜೆಯನ್ನು ಪೂರ್ವಾನ್ವಯವಾಗುವಂತೆ ಹಕ್ಕಿನಲ್ಲಿರುವ ಇತರ ರಜೆಯನ್ನಾಗಿ ಪರಿವರ್ತಿಸಬಹುದು. ಗೈರು ಹಾಜರಿಯನ್ನು ಪೂರ್ವಾನ್ವಯವಾಗಿ ಅಸಾಧಾರಣ ರಜೆಯನ್ನಾಗಿ ಪರಿವರ್ತಿಸಬಹುದಾಗಿದೆ. ಆದರೆ ಗೃಹಕೃತ್ಯಕ್ಕಾಗಿ ಬಳಸಿದ ಭತ್ಯೆರಹಿತ ರಜೆಯನ್ನು ವೈದ್ಯಕೀಯ ಕಾರಣಕ್ಕಾಗಿ ಅಸಾಧಾರಣ ರಜೆ ಎಂದು ಪರಿವರ್ತಿಸುವಂತಿಲ್ಲ.

ಉದ್ಯೋಗಿಯ ಗೈರು ಹಾಜರಿಯನ್ನು ನಿಯಮ – 106ಎ ಅನ್ವಯ ‘‘ಅಧಿಕೃತ ಗೈರು ಹಾಜರಿ’’ಯೆಂದು ನಿರ್ಧರಿಸಿದಲ್ಲಿ ಸದರಿ ಅವಧಿಯನ್ನು ಅರ್ಧವೇತನ ರಜೆಗೆ ಖರ್ಚು ಹಾಕುವುದರ ಜತೆಗೆ ಈ ಅವಧಿಗೆ ವೇತನ ಭತ್ಯೆ ಪಾವತಿಸುವಂತಿಲ್ಲ. ಹಾಗೂ ಉದ್ಯೋಗಿಯು ಶಿಸ್ತುಕ್ರಮಕ್ಕೂ ಒಳಗಾಗುತ್ತಾನೆ.

ಹಕ್ಕಿನಲ್ಲಿಲ್ಲದ ರಜೆಯಲ್ಲಿದ್ದ ಉದ್ಯೋಗಿ ರಾಜೀನಾಮೆ ನೀಡಿದ ಅಥವಾ ನಿವೃತ್ತನಾದ ಪಕ್ಷದಲ್ಲಿ ನಿವೃತ್ತಿ / ರಾಜೀನಾಮೆ ರಜಾ ಪ್ರಾರಂಭದ ದಿನಾಂಕದಿಂದಲೇ ಜಾರಿಗೆ ಬಂದಂತಾಗುವುದು.

ಪರಿವರ್ತಿತ ರಜೆ ಮತ್ತು ಹಕ್ಕಿನಲ್ಲಿಲ್ಲದ ರಜೆ ಅವಧಿಯಲ್ಲಿ ಉದ್ಯೋಗಿ ಮೃತನಾದ ಅಥವಾ ಕಡ್ಡಾಯ ನಿವೃತ್ತಿಗೊಳಿಸದ ಸಂದರ್ಭದಲ್ಲಿ ರಜಾ ವೇತನವನ್ನು ವಸೂಲು ಮಾಡುವಂತಿಲ್ಲ.

ರಜಾ ಅವಧಿಗೆ, ಉದ್ಯೋಗಿ ರಜೆ ಪ್ರಾರಂಭದ ಹಿಂದಿನ ದಿನ ಪಡೆಯುತ್ತಿದ್ದ ವೇತನದ ಆಧಾರದ ಮೇಲೆ ರಜಾ ಸಂಬಳ ಸಂದಾಯ ಮಾಡಬೇಕು.

ಮುಷ್ಕರದ ಅವಧಿಯನ್ನು ಸರ್ಕಾರ ರಜೆಯೆಂದು ಪರಿಗಣಿಸದಿದ್ದಲ್ಲಿ, ಉದ್ಯೋಗಿಯ ಹಕ್ಕಿನಲ್ಲಿರುವ ಎಲ್ಲ ರಜೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ಸಾಂದರ್ಭಿಕ ರಜೆಯನ್ನು ಕರ್ತವ್ಯವೆಂದೇ ಪರಿಗಣಿಸಬೇಕು. ಈ ರಜೆ ಉದ್ಯೋಗಿಯ ವೇತನಕ್ಕೆ ಪ್ರತಿಕೂಲ ಪರಿಣಾಮವಾಗುವುದಿಲ್ಲ.

ಸಾಂರ್ದಭಿಕ ರಜೆಯನ್ನು ಇತರ ರಜೆಗಳೊಡನೆ ಸಂಯೋಜಿಸಿ ಬಳಸುವಂತಿಲ್ಲ.

ಸರ್ಕಾರಿ ನೌಕರನು ಅಗತ್ಯ ಗೃಹ ಕೃತ್ಯ ಹಾಗೂ ಇತರೆ ವೈಯಕ್ತಿಕ ಕಾರ್ಯಗಳನ್ನು ನಿರ್ವಹಿಸಲು ಹಾಗೂ ಅನಾರೋಗ್ಯದ ನಿಮಿತ್ತ ಔಷಧೋಪಚಾರ ಪಡೆಯಲು, ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಕರ್ತವ್ಯಕ್ಕೆ ಗೈರು ಹಾಜರಾಗುವುದನ್ನು ರಜೆ ಎಂದು ಹೇಳಬಹುದು.

ರಜೆಯನ್ನು ಹಕ್ಕೆಂಬಂತೆ ಕೋರುವಂತಿಲ್ಲ, ಸರ್ಕಾರಿ ಸೇವೆಯ ಅಗತ್ಯತೆ ಮತ್ತು ಅನಿವಾರ್ಯತೆಯ ಕಾರಣದಿಂದ ರಜೆಯನ್ನು ರದ್ದುಗೊಳಿಸುವ, ಮೊಟಕುಗೊಳಿಸುವ ಮತ್ತು ನಿರಾಕರಿಸುವ ವಿವೇಚನೆಯು ರಜೆಯನ್ನು ಮಂಜೂರು ಮಾಡುವ ಅಧಿಕಾರವುಳ್ಳ ಅಧಿಕಾರಿಯ ವಿವೇಚನೆಗೆ ಒಳಪಟ್ಟಿರುತ್ತದೆ (ಕ.ಸ.ಸೇ.ನಿ.107).

ಸೇವೆಯಿಂದ ವಜಾ ಮಾಡಲು, ತೆಗೆದುಹಾಕಲು, ಕಡ್ಡಾಯ ನಿವೃತ್ತಿಗೊಳಿಸಲು ಉದ್ದೇಶಿಸಿರುವ ಪ್ರಕರಣಗಳ ನೌಕರರಿಗೆ ರಜೆಯನ್ನು ಮಂಜೂರು ಮಾಡಲು ಅವಕಾಶವಿಲ್ಲ (ಕ.ಸ.ಸೇ.ನಿ. 107). ಅಂಶ ಕಾಲಿಕ (ಪಾರ್ಟ್ ಟೈಂ) ಸರ್ಕಾರಿ ನೌಕರನು ಸಾಂರ್ದಭಿಕ ರಜೆಯ ಹೊರತು ಯಾವುದೇ ಇತರೆ ಪ್ರಕಾರದ ರಜೆ ಹಕ್ಕು ಹೊಂದಿರುವುದಿಲ್ಲ. ಇವರಿಗೆ ಬಿಡುವಿಲ್ಲದ ಇಲಾಖೆಗಳಲ್ಲಿ 15 ದಿನಗಳೂ, ಬಿಡುವಿರುವ ಇಲಾಖೆಗಳಲ್ಲಿ 10 ದಿನಗಳು ಮಾತ್ರ ದೊರೆಯುತ್ತದೆ (ಕ.ಸ.ಸೇ.ನಿ. 147).

ಪುನರ್ ನೇಮಕಗೊಂಡ, ಸಂಬಳ ಅಥವಾ ಗೌರವ ಧನ ಪಡೆಯುತ್ತಿರುವ ನಿವೃತ್ತಿ ನೌಕರರಿಗೆ ಗಳಿಕೆ ರಜೆ (ಕ.ಸ.ಸೇ.ನಿ. 112 ರಂತೆ) ಲಭ್ಯವಾಗುತ್ತದೆ. ಹೀಗೆ ಗಳಿಸಿದ ಗಳಿಕೆ ರಜೆ ಮತ್ತು ನಿವೃತ್ತಿಯ ದಿನಾಂಕದವರೆಗೆ ತನ್ನ ಲೆಕ್ಕದಲ್ಲಿ ಜಮಾ ಇರುವ ಗಳಿಕೆ ರಜೆಗೆ ಸಮನಾದ ನಗದನ್ನು ರಜೆ ಮಂಜೂರಾತಿ ಪ್ರಾಧಿಕಾರ ಮಂಜೂರು ಮಾಡಬಹುದು

(ಕ.ಸ.ಸೇ.ನಿ.150).

ರಜಾ ನಿಯಮಗಳು

ರಜಾ ನಿಯಮಗಳು ಪೂರ‍್ಣ ವಿವರಣೆಯೊಂದಿಗೆ

ರಜಾ ನಿಯಮಗಳು
( ಕೆ.ಸಿ.ಎಸ್.ಆರ್.ನಿಯಮ105 ರಿಂದ 206)
  ಸರ್ಕಾರಿ  ನೌಕರರು  ಈ  ಕೆಳಕಂಡ  ನಿಬಂಧನೆಗೆ  ಒಳಪಟ್ಟು ರಜ  ಸೌಲಭ್ಯ  ಪಡೆಯಬಹುದು.
     -  ಸಕ್ಷಮ  ಪ್ರಾಧಿಕಾರದಿಂದ  ಪೂರ್ವ  ಅನುಮತಿ
         ಪಡೆದುಕೊಳ್ಳಬಹುದು.
     -   ರಜೆಯ  ಸರ್ಕಾರಿ  ನೌಕರನ  ಹಕ್ಕಲ್ಲ  ( ನಿ. 107 )
     -   ಸಾರ್ವಜನಿಕ  ಸೇವಾ  ಅಗತ್ಯತೆಯಲ್ಲಿ  ರಜ
         ಮಂಜೂರು  ಮಾಡುವ  ಪ್ರಾಧಿಕಾರವು  ಕೋರಿರುವ
         ರಜವನ್ನು, ತಿರಸ್ಕರಿಸಬಹುದು, ಈಗಾಗಲೇ
         ಮಂಜೂರಾಗಿದ್ದರೆ  ರದ್ದುಪಡಿಸಬಹುದು (ನಿ.107)
     -   ಸಮರ್ಥನೀಯ  ಕಾರಣಗಳಿಲ್ಲದಿದ್ದಲ್ಲಿ  ಅನಧಿಕೃತ
         ಗೈರು  ಹಾಜರಿ ಎಂದು ತೀರ್ಮಾನಿಸಬಹುದು  ಹಾಗೂ
         ದುರ್ನಡತೆಗೆ  ಇಲಾಖಾ ವಿಚಾರಣೆ  ಹೂಡಬಹುದು
         (ನಿ.106A)
    -  ಮುಷ್ಕರದಲ್ಲಿ  ಭಾಗವಹಿಸಿದ್ದಲ್ಲಿ  ಕಾನೂನು  ಬಾಹಿರವೆಂದು
       ಪರಿಗಣಿಸಿ  ಕ್ರಮ  ಜರುಗಿಸಬಹುದು  (ನಿ. 106ಬಿ)
    -  4  ತಿಂಗಳಿಗೂ  ಮೀರಿದ  ಅನಧಿಕೃತ  ಗೈರು
       ಹಾಜರಿಯಾದ  ನೌಕರನನ್ನು  ಕೆ.ಸಿ.ಎಸ್.  (ಸಿ.ಸಿ.ಎ.)
    -  ಒಂದು  ರಜೆಯನ್ನು  ಮತ್ತೊಂದು  ರಜೆಯೊಂದಿಗೆ
       ಸಂಯೋಜಿಸಬಹುದು. ಆದರೆ  ಆಕಸ್ಮಿಕ  ರಜೆಯನ್ನು
       ಸಂಯೋಜನೆಗೊಳಿಸಲು  ಅವಕಾಶವಿಲ್ಲ.  ( ನಿ. 109 )
ವಿವಿಧ  ಬಗೆಯ  ರಜಗಳು
    1.  ಸಾಂದರ್ಭಿಕ  ರಜ  (ಆಕಸ್ಮಿಕ  ರಜ)  ಅನುಬಂಧ ಬಿ
       2.  ವಿಶೇಷ  ಸಾಂದರ್ಭಿಕ  ರಜ  ಅನುಬಂಧ  ಬಿ
    3.  ಗಳಿಕೆ ರಜ ನಿಯಮ ೧೧೨ (ಬಿಡುವು ಇಲ್ಲದ ಇಲಾಖೆ)
                  ನಿಯಮ 113 (ಬಿಡುವು ಇಲ್ಲದ ಇಲಾಖೆ)
    4.  ಅರ್ಧವೇತನ  ರಜ  ನಿಯಮ  114.
    5.  ಪರಿವರ್ತಿತ  ರಜ  ನಿಯಮ  114.
    6.  ಹಕ್ಕಿನಲ್ಲಿಲ್ಲದ  ರಜ  (ಎಲ್.ಎನ್.ಡಿ), ನಿಯಮ 114,
        ನಿಯಮ  115(6).
    7.  ಅಸಾಧಾರಣ  ರಜ - ನಿಯಮ  117.
    8.  ಪರೀಕ್ಷಾ  ರಜ - ನಿಯಮ  130  ರಿಂದ  134a.
    9.  ಹೆರಿಗೆ  ರಜ - ನಿಯಮ  135  ಮತ್ತು  135a.
   10.  ಪಿತೃತ್ವ  ರಜ - ನಿಯಮ  135ಬಿ.
    11.  ವಿಶೇಷ  ದುರ್ಬಲತೆ ರಜ - ನಿಯಮ
        (136, 137, 138)
ಸಾಂದರ್ಭಿಕ  ರಜೆ  ( ಅನುಬಂಧ  ಬಿ )
 -  ಸರ್ಕಾರಿ  ನೌಕರನ  ಸೇವೆಯ ಮೊದಲ  ಒಂದು
         ವರ್ಷದ  ಸೇವಾವಧಿಯಲ್ಲಿ  ಒಂದು  ತಿಂಗಳ
         ಕರ್ತವ್ಯ ನಂತರ  ಒಂದು  ದಿನದ  ರಜೆ.
     -   ಆ  ನಂತರ  ಪ್ರತಿ  ಕ್ಯಾಲೆಂಡರ್  ವರ್ಷಕ್ಕೆ  15
          ದಿನಗಳು  ಮುಂಗಡವಾಗಿ  ಜಮೆ.
     -   ಅವಿರತವಾಗಿ  ಗರಿಷ್ಟ  7  ದಿನ,  ಸಾರ್ವಜನಿಕ
         ರಜೆಯೊಂದಿಗೆ  ಸಂಯೋಜಿಸಿದಾಗ  ಗರಿಷ್ಟ
         10 ದಿನ.
    -   ಡಿಸೆಂಬರ್  ಅಂತ್ಯದೊಳಗೆ  ಉಪಯೋಗಿಸಿಕೊಳ್ಳದಿದ್ದಲ್ಲಿ  ವ್ಯಯವಾಗುವುದು.
    -   ಇತರೇ  ಹಕ್ಕಿನ  ರಜೆಯೊಂದಿಗೆ  ಸಂಯೋಜಿಸಲು
        ಅವಕಾಶವಿಲ್ಲ.
    -   ಕಛೇರಿ  ಮುಖ್ಯಾಧಿಕಾರಿ ಮಂಜೂರಾತಿ  ಪ್ರಾಧಿಕಾರಿ.
ವಿಶೇಷ  ಸಾಂದರ್ಭಿಕ  ರಜೆ
     ಸರ್ಕಾರಿ  ನೌಕರರಿಗೆ  ನಿರ್ದಿಷ್ಟ  ಸಂದರ್ಭಗಳಿಗೆ  ಅನುಗುಣವಾಗಿ  ವಿಶೇಷ ಸಾಂದರ್ಭಿಕ ರಜೆ  ಮಂಜೂರು  ಮಾಡಲು  ಅವಕಾಶ  ಕಲ್ಪಿಸಲಾಗಿದೆ. ಕೆಲವು  ವಿಶೇಷ  ಸಂದರ್ಭಗಳು  ಎಂದರೆ,
   ಹುಚ್ಚುಪ್ರಾಣಿಗಳ  ಕಡಿತದಿಂದ  ವೈದ್ಯಕೀಯ  ಚಿಕಿತ್ಸಾ
    ದಿನಗಳಿಗೆ  ಗರಿಷ್ಟ ಮಿತಿ  14  ದಿನಗಳು.
   ಸರ್ಕಾರಿ  ನೌಕರನು  ಕಡ್ಡಾಯ  ಜೀವ  ವಿಮಾ
    ಪಾಲಿಸಿ  ಹೊಂದಲು  ವೈದ್ಯಕೀಯ  ಪರೀಕ್ಷೆಗೆ
    ಹಾಜರಾಗಲು.
   ಸರ್ಕಾರಿ  ನೌಕರನಿಗೆ  ಈ  ಕೆಳಕಂಡ  ಸಂದರ್ಭ
    ಗಳಿಗೆ  ವಾರ್ಷಿಕವಾಗಿ  ಗರಿಷ್ಠ  30  ದಿನಗಳ
    ಮಿತಿಗೊಳಪಟ್ಟು,
    1)  ರಾಷ್ಟ್ರೀಯ  ಮತ್ತು  ಅಂತರರಾಷ್ಟ್ರೀಯ ಮಟ್ಟದಲ್ಲಿ
       ಕ್ರೀಡಾ  ಚಟುವಟಿಕೆಗಳಲ್ಲಿ  ಭಾಗವಹಿಸಲು.
      2.  ರಾಜ್ಯ  ಅಥವಾ  ವಲಯ  ಮಟ್ಟದಲ್ಲಿ  ಏರ್ಪಡಿಸುವ  ಕ್ರೀಡಾ ಚಟುವಟಿಕೆಗಳಲ್ಲಿ  ರಾಜ್ಯ  ಕ್ರೀಡಾ
          ಪ್ರಾಧಿಕಾರದಿಂದ  ಆಯ್ಕೆಯಾದ  ಕ್ರೀಡಾಪಟುಗಳಿಗೆ.
      3.  ರಾಜ್ಯದ  ವಿವಿಧ  ಕ್ರೀಡಾ ಮಂಡಳಿ/ಪ್ರಾಧಿಕಾರಗಳು
          ಏರ್ಪಡಿಸುವ  ರಾಜ್ಯ ಅಥವಾ ಅಂತರ ರಾಜ್ಯ
          ಮಟ್ಟದ  ಕ್ರೀಡಾಸ್ಪರ್ಧೆಗಳಲ್ಲಿ  ರಾಜ್ಯ  ಸರ್ಕಾರಿ
          ನೌಕರರ  ತಂಡವನ್ನು  ಪ್ರತಿನಿಧಿಸುವ  ನೌಕರರಿಗೆ
          ವಾರ್ಷಿಕ 15 ದಿನಗಳ ಮಿತಿಗೊಳಪಟ್ಟು  ರಜೆ.
          4.  ರಾಷ್ಟ್ರೀಯ  ಕ್ರೀಡಾ ಸಂಸ್ಥೆಗಳು ಏರ್ಪಡಿಸುವ ವಿವಿಧ
          ಕ್ರೀಡಾ ತರಬೇತಿ ಅಥವಾ ಕೋಚಿಂಗ್ ಕ್ಯಾಂಪುಗಳಲ್ಲಿ  ಭಾಗವಹಿಸುವ  ಸರ್ಕಾರಿ  ನೌಕರರಿಗೆ.
      5.   ರಾಷ್ಟ್ರೀಯ  ಪರ್ವತಾರೋಹಣ  ಸಂಸ್ಥೆಯು
           ಏರ್ಪಡಿಸುವ ಪರ್ವತಾರೋಹಣ ಚಟುವಟಿಕೆಗಳಲ್ಲಿ  ಭಾಗವಹಿಸುವ  ನೌಕರರು.
      ಮೇಲ್ಕಂಡ  ಸಂದರ್ಭಗಳಲ್ಲಿ  ವಿಶೇಷ  ಸಾಂದರ್ಭಿಕ ರಜೆ ಮಂಜೂರು  ಮಾಡುವ  ಪ್ರಾಧಿಕಾರಿಯು  ಆಯಾ ಇಲಾಖೆಯ  ಆಡಳಿತಾತ್ಮಕ ಇಲಾಖಾ ಮುಖ್ಯಾಧಿಕಾರಿಗಳು, ಈ ವಿಶೇಷ  ಸಾಂದರ್ಭಿಕ  ರಜೆಗಳೊಂದಿಗೆ,  ನೌಕರರು  ಸರ್ಕಾರಿ  ರಜಾ ದಿನಗಳು ( 3 ದಿನಗಳ ಮಿತಿಗೊಳಪಟ್ಟು) ಮತ್ತು  ತಮ್ಮ  ಹಕ್ಕಿನ  ಇತರೆ  ರಜೆಗಳೊಂದಿಗೆ  ಸಂಯೋಜಿಸಬಹುದು.
   ವಿವಾಹಿತ  ಸರ್ಕಾರಿ  ನೌಕರರು  ಪ್ರಾಸೆಕ್ಟಮಿ  ಶಸ್ತ್ರಚಿಕಿತ್ಸೆಗೆ  ಒಳಗಾದಲ್ಲಿ  ವೈದ್ಯಕೀಯ ಪ್ರಮಾಣಪತ್ರದೊಂದಿಗೆ  ಗರಿಷ್ಟ  7  ದಿನಗಳು.
   ಸರ್ಕಾರಿ  ನೌಕರನ  ಪತ್ನಿಯು  ಹೆರಿಗೆ  ಸಂದರ್ಭದಲ್ಲಿ  ಟುಬೆಕ್ಟಮಿ  ಶಸ್ತ್ರ  ಚಿಕಿತ್ಸೆಗೆ  ಒಳಗಾದಲ್ಲಿ, ಆ
    ಸಂದರ್ಭದಲ್ಲಿ  ವೈದ್ಯಾಧಿಕಾರಿಯು ಪ್ರಮಾಣಪತ್ರದ  ಅನ್ವಯ ಪತ್ನಿಯ  ಆರೋಗ್ಯ  ದೃಶ್ಟಿಯಿಂದ ಸರ್ಕಾರಿ ನೌಕರನ ಹಾಜರಾತಿ  ಅಗತ್ಯವೆಂದು  ದೃಢೀ ಕರಿಸಿದರೆ  ಗರಿಷ್ಟ 7 ದಿನಗಳು.
   ವೈದ್ಯಾಧಿಕಾರಿಗಳ  ಪ್ರಮಾಣ  ಪತ್ರದ  ಅನ್ವಯ
    ನೌಕರರಿಗೆ  ಮೊದಲ  ಶಸ್ತ್ರ  ಚಿಕಿತ್ಸೆಯು
    ವಿಫಲವಾಗಿದೆಯೆಂದು  ದೃಢೀಕರಿಸಿ,
        ಎರಡನೇ  ಬಾರಿ  ವ್ಯಾಸೆಕ್ಟಮಿ  ಶಸ್ತ್ರ  ಚಿಕಿತ್ಸೆಗೆ ಒಳಗಾದಲ್ಲಿ  ಗರಿಷ್ಠ  6  ದಿನಗಳು.
    ಮಹಿಳಾ  ನೌಕರರು 
        sಣeಡಿiಟisಚಿಣioಟಿ  ಚಿಕಿತ್ಸೆಗೆ  ಒಳಗಾದಲ್ಲಿ ಗರಿಷ್ಠ 14
     ದಿನಗಳು ( ಮೊದಲ  ಚಿಕಿತ್ಸೆ  ವಿಫಲಗೊಂಡಲ್ಲಿ
     ಎರಡನೇ ಬಾರಿ ಚಿಕಿತ್ಸೆಗೆ ಒಳಗಾದಲ್ಲಿ ).
    ಸರ್ಕಾರಿ  ನೌಕರನು  ಅವಿವಾಹಿತನಾಗಿದ್ದು, ಅಥವಾ
     ಎರಡಕ್ಕಿಂತ  ಕಡಿಮೆ  ಮಕ್ಕಳನ್ನು  ಹೊಂದಿದ್ದು  ಶಸ್ತ್ರ
     ಚಿಕಿತ್ಸೆಗೆ  ಒಳಪಟ್ಟ  ನಂತರ  ಮಕ್ಕಳ  ಮರಣ
     ಅಥವಾ  ಇನ್ನಿತರ  ಸಮರ್ಥನೀಯ  ಕಾರಣಗಳಿಗಾಗಿ
     ಪುನಃ ಖeಛಿoಟಿಟisಚಿಣioಟಿ  ಔಠಿeಡಿಚಿಣioಟಿ
       ಒಳಗಾದಲ್ಲಿ, ಕನಿಷ್ಟ  21  ದಿನಗಳು.
   ವಿವಾಹಿತ  ಸರ್ಕಾರಿ  ನೌಕರರು  ವ್ಯಾಸಕ್ಟಮಿ
    ಅಥವಾ ಟುಬೆಕ್ಟಮಿ  ಶಸ್ತ್ರ ಚಿಕಿತ್ಸೆಯ  ನಂತರ
    ಆರೋಗ್ಯ  ಸ್ಥಿತಿ  ವಿಷಮಗೊಂಡಲ್ಲಿ, ಚಿಕಿತ್ಸಾ
    ಅವಧಿಗೆ  ವೈದ್ಯಕೀಯ  ಅಧಿಕಾರಿಗಳ  ಪ್ರಮಾಣಪತ್ರದ  ಅನ್ವಯ,  ಹೆಚ್ಚಿನ  ಅವಧಿಗೆ  ವಿಶೇಷ  ರಜೆ.
    ಮಹಿಳಾ  ಸರ್ಕಾರಿ  ನೌಕರರಿಗೆ  ಚಿಕಿತ್ಸೆಗೆ
     ಒಳಗಾಗಲು  ಒಂದು  ದಿನದ  ರಜೆ.
    ರಾಜ್ಯ  ಸರ್ಕಾರಿ  ನೌಕರರ  ಸಂಘದ / ರಾಷ್ಟ್ರೀಯ
     ಸೆಕೆಂಡರಿ  ಶಾಲೆಗಳ  ಶಿಕ್ಷಕರ  ಮಂಡಳಿಯ,
     ಪದಾಧಿಕಾರಿಗಳು  ಮತ್ತು  ಕಾರ್ಯಕಾರಿ
     ಸಮಿತಿಯ  ಸದಸ್ಯರು  ಸಂಘ/ಮಂಡಳಿಯ  ಸಭೆ
     ಕಾರ್ಯಾಗಾರ
        ಸೆಮಿನಾರ್  ಇತ್ಯಾದಿಗಳಲ್ಲಿ  ಭಾಗವಹಿಸಲು
        ವಾರ್ಷಿಕವಾಗಿ  ಗರಿಷ್ಟ  15  ದಿನಗಳು.
    ಸರ್ಕಾರಿ  ನೌಕರನು  ರಕ್ತದಾನ  ಶಿಬಿರಗಳಲ್ಲಿ
     ಉಚಿತ  ರಕ್ತದಾನ  ಮಾಡಿದಲ್ಲಿ,  ಒಂದು  ದಿನದ
     ರಜೆ.
    ವಿವಿಧ  ವಿಶ್ವವಿದ್ಯಾನಿಲಯಗಳು  ಏರ್ಪಡಿಸುವ
     ಶೈಕ್ಷಣಿಕ  ಸಭೆಗಳಲ್ಲಿ  ಭಾಗವಹಿಸುವ   ಮತ್ತು
     ವಿವಿಧ  ಕ್ಷೇತ್ರದಲ್ಲಿ  ನಡೆಸುವ  ಶೈಕ್ಷಣಿಕ  ಪರೀಕ್ಷೆಗಳಲ್ಲಿ  ಪರೀಕ್ಷಾಕಾರರು  ಅಥವಾ  ಮೇಲ್ವಿಚಾರಕರಾಗಿ  ಭಾಗವಹಿಸುವ  ನೌಕರರಿಗೆ  ವಾರ್ಷಿಕ
      ಗರಿಷ್ಠ  30  ದಿನಗಳು.
     ನವದೆಹಲಿಯ  ಭಾರತೀಯ  ಸಾರ್ವಜನಿಕ
      ಆಡಳಿತ  ಸಂಸ್ಥೆಯು  ಏರ್ಪಡಿಸುವ  ವಿಶೇಷ
      ಚಟುವಟಿಕೆಗಳಲ್ಲಿ  ಭಾಗವಹಿಸುವ  ನೌಕರರಿಗೆ
      ವಾರ್ಷಿಕ  ಗರಿಷ್ಠ  6  ದಿನಗಳು
    ರಾಜ್ಯ  ಕನ್ನಡ  ಮತ್ತು  ಸಂಸ್ಕೃತಿ  ಹಾಗೂ ರಾಜ್ಯ
     ಯುವಜನ  ಸೇವೆ  ಮತ್ತು  ಕ್ರೀಡಾ   ಚಟುವಟಿಕೆಗಳಲ್ಲಿ  ಭಾಗವಹಿಸಲು  ವಾರ್ಷಿಕ  ಗರಿಷ್ಠ  15
     ದಿನಗಳು.
    ಕರ್ನಾಟಕ  ವಾಣಿಜ್ಯ  ಪರೀಕ್ಷೆಗಳ  ಮಂಡಳಿಯು
     ಏರ್ಪಡಿಸುವ  ಶೀಘ್ರಲಿಪಿ/ಬೆರಳಚ್ಚು  ಪರೀಕ್ಷೆಗಳಲ್ಲಿ
   -  ಕರ್ತವ್ಯವಲ್ಲದ  ಅವಧಿಯ ಪ್ರತಿ  10  ದಿನಗಳಿಗೆ
        ಒಂದು  ದಿನದ  ರಜೆ,  ಮುಂದಿನ  ಅರ್ಧವರ್ಷದ
       ಅವಧಿಯಲ್ಲಿ  ಲೆಕ್ಕಕ್ಕೆ ನೀಡುವಾಗ  ಮಿತಿಗೊಳಿಸುವುದು.
    -  ಲೆಕ್ಕದಲ್ಲಿ  ಹೊಂದಿರಬಹುದಾದ  ಗರಿಷ್ಠ  ಮಿತಿ
        300  ದಿನಗಳು.
    -   ಅಧ್ಯರ್ಪಣೆ  ಮತ್ತು  ನಗಧೀಕರಣದ  ಸೌಲಭ್ಯ.
    -   ಗಳಿಕೆ  ರಜೆಯನ್ನು  ಒಂದು  ಅರ್ಧ  ವರ್ಷದಿಂದ
        ಮುಂದಿನ  ಅರ್ಧ  ವರ್ಷದ  ಅವಧಿವರೆಗೆ
        ಉಪಯೋಗಿಸಿದರೆ ( 26/6/2007  ರಿಂದ 10/7/2007
             ರವರೆಗೆ  ಅಥವಾ  26/12/2007  ರಿಂದ 9/1/2008
        ರವರೆಗೆ  ಬಳಸಿಕೊಂಡಿದ್ದರೆ )
ರಜೆ  ಉಪಯೋಗಿಸಿದ  ಅರ್ಧ ವರ್ಷಕ್ಕೆ  ಮೊದಲು   ಉಪಯೋಗಿಸಿಕೊಂಡ  ರಜೆಯನ್ನು  ನೌಕರನ  ಹಕ್ಕಿನಲ್ಲಿರುವ  ರಜೆಯನ್ನು  ಕಳೆಯತಕ್ಕದ್ದು, ಹಾಗೂ  1/7/2007  ಅಥವಾ  1/1/2008  ರ  ಗಳಿಕೆ  ರಜೆ  ಜಮೆ  ಮಾಡಿ  ನಂತರದ  ಅವಧಿಯಲ್ಲಿ  ಉಪಯೋಗಿಸಿಕೊಂಡ  ರಜೆಯನ್ನು  ಲೆಕ್ಕದಿಂದ  ಕಳೆಯುವುದು.
ಉದಾ:- 30/6/2007  ಗಳಿಕೆ  ರಜೆ  120  ದಿನಗಳು,  15  ದಿನಗಳು  ಉಪಯೋಗಿಸಿಕೊಂಡ  ಗಳಿಕೆ  ರಜೆ  ( 26/6/2007  ರಿಂದ  30/6/2007  ರಜೆ  ಉಪಯೋಗಿಸಿಕೊಂಡಿದ್ದು, ಭಾಕಿ  120-5=115 )  1/7/2007  ರಲಿ  ಲೆಕ್ಕಕ್ಕೆ  ನೀಡಿಕೆ  ದಿನಗಳು, ಒಟ್ಟು  ಶಿಲ್ಕು  115+15=130  ದಿನಗಳು.
ಉಪಯೋಗಿಸಿಕೊಂಡ  ರಜೆ  1/7/2007  ರಿಂದ  10/7/2007  ರವರೆಗೆ  10  ದಿನಗಳು  ಉಳಿಕೆ  130-10=120  ದಿನಗಳು.
- ಗಳಿಸಿದ  ರಜೆ  ಗರಿಷ್ಠ  300  ದಿನಗಳು, ದಿನಾಂಕ  1/7/95
ರಿಂದ  ಗರಿಷ್ಟ  ಮಿತಿ  300  ಅಥವಾ  225  ಕ್ಕಿಂತ  ಹೆಚ್ಚಿನ  ರಜೆ  ಹೊಂದಿದ್ದಲ್ಲಿ  ಅರ್ಧವರ್ಷದ  15  ದಿನಗಳನ್ನು ಪ್ರತ್ಯೇಕವಾಗಿ  ಜಮೆ  ಮಾಡತಕ್ಕದ್ದು.  ಆ  ಅರ್ಧವರ್ಷದ  ಅವಧಿಯಲ್ಲಿ  ಉಪಯೋಗಿಸಿಕೊಂಡ  ರಜೆಯನ್ನು  ಕಳೆದು  ಉಳಿದ  ರಜೆಯನ್ನು  300  ದಿನಗಳಿಗೆ  ಮಿತಿಗೊಳಿಸತಕ್ಕದ್ದು.
ಉದಾ:- 30/6/2007  ಅಂತ್ಯಕ್ಕೆ  240  ದಿನಗಳು,  ದಿನಾಂಕ  1/7/95  ರಂದು ಲೆಕ್ಕದ್ದೆ ನೀಡಿಕೆ.  15  ದಿನಗಳು  240+15  ದಿನಗಳು ಆದರೆ,  ದಿನಾಂಕ 31/12/2007 ರಂದು ಲೆಕ್ಕದರುವ  ಶಿಲ್ಕು  240  ದಿನಗಳಿಗೆ ಮಿತಿಗೊಳಿಸಿ ದಿನಾಂಕ 1/1/2008 ರಂದು 15 ದಿನಗಳ  ರಜೆ  ನೀಡಿಕೆ  ನಂತರ  240+15  ದಿನಗಳು.
- ಗಳಿಕೆ  ರಜೆಯನ್ನು  ಮುಂಗಡವಾಗಿ  ಜಮೆ  ಮಾಡಿದ  ನಂತರ  ಆ ಅರ್ಧವರ್ಷದ ಅವಧಿಯಲ್ಲಿ  ಗೈರು  ಹಾಜರಿ / ಅಸಾಧಾರಣ  ರಜೆ  ಬಳಸಿದರೆ  ಅದರ  1/10 ಭಾಗ ವನ್ನು  ಲೆಕ್ಕಮಾಡಿ  ಗರಿಷ್ಟ  15  ದಿನಗಳು  ಮೀರದಂತೆ,  ಮುಂದಿನ  ಅರ್ಧವರ್ಷದ  ಗಳಿಕೆ  ರಜೆ  ಜಮೆ  ಮಾಡುವಾಗ  ಕಳೆಯತಕ್ಕದು.
-
ಉದಾ:- ೩೧/೧೨/೨೦೦೬ ರ ಅಂತ್ಯಕ್ಕೆ  ಲೆಕ್ಕದಲ್ಲಿರುವ  ಗಳಿಕೆ  ರಜೆ,  ೧೨೨  ದಿನಗಳು, ೧/೧/೦೭  ರಂದು ೧೫  ದಿನಗಳು  ನೀಡಿಕೆ  (೧೨೨+೧೫)  ೧೩೭  ದಿನಗಳು,  ನೌಕರನು  ದಿನಾಂಕ  ೧/೪/೨೦೦೭  ರಿಂದ  ೩೦/೪/೨೦೦೭  ಗೈರು  ಹಾಜರಿ ೩೦  ದಿನಗಳು  ೧/೧೦ ರಂತೆ ೩ ದಿನಗಳು  ರಜೆಯನ್ನು  ೧/೭/೨೦೦೭  ರಂದು  ಲೆಕ್ಕಕ್ಕೆ  ನೀಡುವ  ರಜೆಯ ಮಿತಿಗೊಳಿಸಿ
        ( ೧೫-೩೦ * ೧/೧೦  ರಂತೆ ) = ೧೨  ದಿನಗಳು  ನೀಡಿಕೆ,  ಲೆಕ್ಕದಲ್ಲಿರುವ  ರಜೆಯ   ಶಿಲ್ಕು
         ೧೩೭+೧೨=೧೪೯  ದಿನಗಳು.
ಬಿಡುವು  ಇಲಾಖೆ  ನೌಕರರಿಗೆ
ಸರ್ಕಾರಿ  ನೌಕರನು ಕರ್ತವ್ಯದ  ಅವಧಿಯಲ್ಲಿ ಅರ್ಜಿಸಿದ ರಜೆ (ನಿ. 113)
  -   ಪ್ರತಿ  ಅರ್ಧವರ್ಷದ  ಪ್ರಾರಂಭದಲ್ಲಿ  ಮುಂಗಡ  5
      ದಿನಗಳು  ಲೆಕ್ಕಕ್ಕೆ  ಜಮೆ.
  -  ಅರ್ಧವರ್ಷದ  ಸೇವೆಯ  ಪ್ರಾರಂಭ  ಅಥವಾ  ಪೂರ್ಣಗೊಳಿಸಿದ  ಸಂದರ್ಭದಲ್ಲಿ  ಪ್ರತಿ  ತಿಂಗಳ ಕರ್ತವ್ಯದ
     ಅವಧಿಗೆ  5/6  ಅನುಪಾತದಲ್ಲಿ.
       -  ಕರ್ತವ್ಯವಲ್ಲದ  ಅವಧಿಯ  ಪ್ರತಿ  ತಿಂಗಳಿಗೆ  5/6
       ಅನುಪಾತದಲ್ಲಿ  ಮುಂದಿನ  ಅರ್ಧವರ್ಷದ  ಅವಧಿಯಲ್ಲಿ
       ಲೆಕ್ಕಕ್ಕೆ  ನೀಡುವಾಗ  ಮಿತಿಗೊಳಿಸುವುದು.
       -  ಲೆಕ್ಕದಲ್ಲಿ  ಹೊಂದಿರಬಹುದಾದ  ಗರಿಷ್ಠ  ಮಿತಿ  240+5
       ದಿನಗಳು.
    -  ಅಧ್ಯರ್ಪಣೆ  ಮತ್ತು  ನಗಧೀಕರಣದ  ಸೌಲಭ್ಯ.
ಉದಾ:- ಒಬ್ಬ  ಸರ್ಕಾರಿ  ನೌಕರನು  ದಿನಾಂಕ  ೫/೩/೨೦೦೭  ರಂದು  ಸೇವೆಗೆ  ಸೇರಿದ್ದರೆ,  ೧/೪/೨೦೦೭  ರಿಂದ  ೩೦/೬/೨೦೦೭  ರವರೆಗೆ  ೩  ತಿಂಗಳ  ಪೂರ್ಣಗೊಂಡ  ಸೇವೆಗೆ  ಗಳಿಕೆ  ರಜೆ ೩*೫/೬=೨  ಳಿ  ದಿನಗಳು  ಲೆಕ್ಕಕ್ಕೆ  ನೀಡಿ, ದಿನಾಂಕ  ೧/೭/೦೭  ರಂದು  ೫  ದಿನಗಳು  ಮುಂಗಡ  ನೀಡಿಕೆ,  ಒಟ್ಟು  ೫*೩=೮  ದಿನಗಳು  ಗಳಿಕೆ  ರಜೆಯನ್ನು  ಹೊಂದಿರುವರು.
ಉದಾ:- ಒಬ್ಬ  ಸರ್ಕಾರಿ  ನೌಕರನು  ದಿನಾಂಕ  ೩೧/೧೦/೨೦೦೭  ರಂದು  ವಯೋನಿವೃತ್ತಿ  ಹೊಂದಿದ್ದಲ್ಲಿ,   ೧/೭/೨೦೦೭  ರಿಂದ  ೩೧/೧೦/೨೦೦೭  ರವರೆಗೆ  ೪  ತಿಂಗಳಿಗೆ   ೪*೫/೬= ೩.೩ ಒಟ್ಟು  ೩  ದಿನಗಳು  ರಜೆಯನ್ನು  ಜಮೆ  ಮಾಡಬಹುದು.
        ಗಳಿಕೆ  ರಜೆ  ನಗದೀಕರಣ  ಸೌಲಭ್ಯ
       ( ನಿಯಮ 118  ಅನುಬಂಧ ಸಿ )
    ಸರ್ಕಾರಿ ನೌಕರರು,  ನಿವೃತ್ತಿ  ನಂತರ  ಕನಿಷ್ಠ  ಒಂದು ವರ್ಷದ  ಅವಧಿಗೆ  ಪುನರ್  ನೇಮಕಾತಿ  ಹೊಂದಿರುವ  ಸರ್ಕಾರಿ  ನೌಕರರು  ಒಂದು  ವರ್ಷದ  ಅವಧಿಗೆ  ಮೀರದಂತೆ  ಗುತ್ತಿಗೆಯಾಧಾರದ  ಮೇಲೆ  ನೇಮಕ  ಮಾಡಲ್ಪಟ್ಟಿರುವ ಸರ್ಕಾರಿ  ನೌಕರರು, ನಿಯಮ  112  ರನ್ವಯ  ಸೇವಾವಧಿಯಲ್ಲಿ  ಅರ್ಜಿಸಿರುವ  ಗಳಿಕೆ  ರಜೆಯನ್ನು,
ದಿನಾಂಕ  1/8/1981  ರಿಂದ  ಪ್ರಾರಂಭವಾಗದಂತೆ  ಪ್ರತಿ  ಎರಡು ಕ್ಯಾಲೆಂಡರ್  ವರ್ಷಗಳ  ಬ್ಲಾಕ್  ಅವಧಿಯಲ್ಲಿ ಒಮ್ಮೆ ಗರಿಷ್ಠ  30  ದಿನಗಳ  ಗಳಿಕೆ  ರಜೆಯನ್ನು  ಅಧ್ಯರ್ಪಿಸಲು  ಅಭಿಮತ  ನೀಡಿ, ರಜೆಯ  ಸಂಬಳ  ನಗದೀಕರಣ  ಸೌಲಭ್ಯವನ್ನು  ಪಡೆಯಬಹುದು.
      ಈ  ರಜೆ ನಗದೀಕರಣ  ಸೌಲಭ್ಯವನ್ನು  ನೌಕರರು  ಕರ್ತವ್ಯದ  ಅವಧಿಯಲ್ಲಿ  ಅಥವಾ  ನಿವೃತ್ತಿ  ಪೂರ್ವಾವಧಿಯ  ರಜೆಯ  ಅವಧಿ ವಿನಹ, ಉಳಿದ ರಜೆ ಅವಧಿಯಲ್ಲಿ  ಪಡೆಯಬಹುದು.  ರಜೆ ನಗದೀಕರಣ ಸೌಲಭ್ಯವನ್ನು ಉಪಯೋಗಿಸಿಕೊಳ್ಳಲು ನಿಗದಿತ 1-ಎ ನಮೂನೆಯಲ್ಲಿ ಒಂದು ತಿಂಗಳ ಮುಂಚಿತವಾಗಿ  ಅರ್ಜಿಯನ್ನು  ಸಲ್ಲಿಸಬೇಕು.
ಗಳಿಕೆ  ರಜೆ ಮಂಜೂರಾತಿ  ನೀಡುವ  ಅಧಿಕಾರಿಯು  ರಜೆ ಸೌಲಭ್ಯವನ್ನು  ಮಂಜೂರು  ಮಾಡುವ  ಅಧಿಕಾರ  ಹೊಂದಿರುತ್ತಾರೆ.  ರಜೆ  ನಗದೀಕರಣ  ಸೌಲಭ್ಯವನ್ನು  ಮಂಜೂರಾತಿ  ನೀಡುವ  ಆದೇಶದಲ್ಲಿ  ಯಾವ  ದಿನಾಂಕದಲ್ಲಿ ರಜೆಯನ್ನು  ಆದ್ಯರ್ಪಿಸಲು  ಅನುಮತಿ  ನೀಡಲಾಗಿದೆ  ಎಂಬುದನ್ನು  ಸ್ಪಷ್ಟವಾಗಿ  ನಮೂದಿಸಬೇಕು.  ಹಾಗೂ  ಆ  ಸಂಬಂಧವಾಗಿ  ನೌಕರರ  ರಜೆ  ಲೆಕ್ಕದಿಂದ ಆ  ದಿನಾಂಕದಲ್ಲಿ ಆಧ್ಯರ್ಪಿಸಿದ  ರಜೆಯನ್ನು  ಕಳೆಯಬೇಕು.  ರಜೆ  ನಗದೀಕರಣ  ಸೌಲಭ್ಯ  ಮಂಜೂರಾತಿ  ನೀಡದ  ಸಂಬಂಧವಾಗಿ  ನೌಕರರ  ಸೇವಾ  ಪುಸ್ತಕದ  ಭಾಗ  3  ರಲ್ಲಿ  ಮತ್ತು  ರಜೆ  ಲೆಕ್ಕದಲ್ಲಿ  ಅಗತ್ಯ  ದಾಖಲೆ  ನಮೂದಿಸಿ  ದೃಡೀಕರಿಸಬೇಕು.
     ಪರಿವೀಕ್ಷಣಾ  ಅವಧಿಯಲ್ಲಿಯೂ  ಸರ್ಕಾರಿ ನೌಕರರು  ತಮ್ಮ ಹಕ್ಕಿನಲ್ಲಿರುವ  ಗಳಿಕೆ  ರಜೆಯನ್ನು  ಅಧ್ಯರ್ಪಿಸಿ, ರಜೆ  ನಗದೀಕರಣ ಸೌಲಭ್ಯವನ್ನು  ಪಡೆಯಬಹುದಾಗಿದೆ.  ಆದರೆ,  ಅನಧಿಕೃತವಾಗಿ  ಗೈರು  ಹಾಜರಿಯಾಗಿರುವ  ನೌಕರರು  ಮತ್ತು ಸೇವೆಯಿಂದ ನಿಲಂಭನೆಗೊಳಿಸಿರುವ  ನೌಕರರಿಗೆ  ರಜೆ  ನಗದೀಕರಣ  ಸೌಲಭ್ಯವನ್ನು  ಪಡೆಯಲು  ಅರ್ಹತೆಯಿರುವುದಿಲ್ಲ.  ಸ್ಥಳೀಯ  ಅಭ್ಯರ್ಥಿಗಳು  ರಜೆ  ನಗದೀಕರಣ  ಸೌಲರ್ಭಯವನ್ನು  ಪಡೆಯಲು  ಅರ್ಹರಲ್ಲ.
     ರಜೆ  ನಗದೀಕರಣ  ಸೌಲಭ್ಯ  ಪಡೆಯುವ  ನೌಕರರಿಗೆ ರಜೆ  ಸಂಬಳ  ಎಂದರೆ,
ನೌಕರರು  ಪಡೆಯುತ್ತಿರುವ  ಮೂಲವೇತನ ( ಹೆಚ್ಚುವರಿ  ವೇತನ ಬಡ್ತಿ  ಮತ್ತು  ಸ್ಥಗಿತ  ವೇತನ ಬಡ್ತಿ  ಸೇರಿದಂತೆ ) - ಹುದ್ದೆಗೆ ಮಂಜೂರಾಗಿರುವ  ವಿಶೇಷ  ವೇತನ, ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ನಗರ  ಪರಿಹಾರ  ಭತ್ಯೆ ಸೇರ್ಪಡೆಯಾಗುವುದು.  ಪ್ರತಿ  ದಿನದ  ರಜೆ  ಸಂಬಳ  ಎಂದರೆ ನೌಕರರ  ಸಂಬಳದ 1/30 ರ  ಅನುಪಾತದಲ್ಲಿ  ಲೆಕ್ಕಹಾಕತಕ್ಕದ್ದು.
ನಿವೃತ್ತಿ  ಪೂರ್ವ  ಗಳಿಕೆ  ರಜೆ  ನಗದೀಕರಣ
     ನಿವೃತ್ತಿ  ವಯಸ್ಸು ತಲುಪಿದ ನಂತರ  ಸೇವಕ  ಷರತ್ತುಗಳಿಗೆ  ಅನುಸಾರ  ವಯೋಮಿತಿಯನ್ವಯ  ನಿವೃತ್ತಿ ಹೊಂದುವ  ಸರ್ಕಾರಿ  ನೌಕರರಿಗೆ,
ರಜೆ  ಮಂಜೂರ‍್ಮಾಡುವ  ಅಧಿಕಾರಿಯು  ಸ್ವಪ್ರೇರಣಯಿಂದ, ನಿವೃತ್ತಿ ದಿನಾಂಕದಲ್ಲಿ  ನೌಕರನ  ಲೆಕ್ಕದಲ್ಲಿ  ಹೊಂದಿರುವ  ಗಳಿಕೆಯ  ರಜೆಯ  ಗರಿಷ್ಟ ಮಿತಿ  300 ದಿನಗಳಿಗೆ  ಒಳಪಟ್ಟು  ರಜೆ  ಸಂಬಳವನ್ನು  ರಜೆ  ಸಂಬಳವನ್ನು  ಮಂಜೂರ‍್ಮಾಡಬೇಕು
(118-a) (1-a) ಆ ಪ್ರಕಾರ ಪಾವತಿ  ಮಾಡುವ  ರಜೆ  ಸಂಬಳವು  ಒಂದು  ಅವಧಿಯ  ಇತ್ಯರ್ಥವಾಗಿದ್ದು, ಪೂರ್ವಾನ್ವಯ  ವೇತನ  ಅಥವಾ  ತುಟ್ಟೀಭತ್ಯೆ  ಪರಿಷ್ಕರಣೆಯ  ಸಂದರ್ಭದಲ್ಲಿ  ವ್ಯತ್ಯಾಸದ  ಮೊಬಲಗು  ಪಾವತಿ  ಮಾಡುವಂತಿಲ್ಲ.  ಮನೆ  ಬಾಡಿಗೆ ಭತ್ಯೆ  ಮತ್ತು  ನಗರ  ಪರಿಹಾರ  ಭತ್ಯೆಯು  ಈ  ರಜೆ  ಸಂಬಳದಲ್ಲಿ  ಸೇರ್ಪಡೆಯಾಗುವುದಿಲ್ಲ.
ರಜೆ ಸಂಬಳ        ನಿವೃತ್ತಿ  ದಿನಾಂಕದಲ್ಲಿ  ನೌಕರನು       ನೌಕರನು  ಉಪಯೋಗಿಸಿಕೊಳ್ಳದೇ
ಮೊಬಲಗು    =    ಪಡೆಯುತ್ತಿರುವ  ಮೂಲವೇತನ    *   ನಿವೃತ್ತಿ  ದಿನಾಂಕದಲ್ಲಿ  ಲೆಕ್ಕದಲ್ಲಿ
                                                      ಹೊಂದಿದ್ದ  ಗಳಿಕೆ  ರಜೆ  ಗರಿಷ್ಟ
                                                      ಮಿತಿ  300  ದಿನಗಳಿಗೆ ಒಳಪಟ್ಟು.
                  ಆ  ದಿನಾಂಕದಲ್ಲಿದ್ದ  ತುಟ್ಟಿ
                    ಭತ್ಯೆಯ  ಮೊಬಲಗು.
----------------------------------------------------------
                                        30
       ನಿವೃತ್ತ  ನೌಕರನ  ವಿರುದ್ಧ  ದುರ್ನಡತೆ, ಅಥವಾ ಆರೋಪಗಳ ಸಂಬಂಧ ವಿಚಾರಣೆಗಾಗಿ  ನಿಲಂಬನೆಯಲ್ಲಿದ್ದು, ಅಥವಾ  ಶಿಸ್ತಿನ  ವಿಚಾರಣೆಯು ಇತ್ಯರ್ಥವಾಗದೇ  ಬಾಕಿ ಉಳಿದಿದ್ದು, ಸರ್ಕಾರಕ್ಕೆ ನಿವೃತ್ತ  ನೌಕರನಿಂದ  ಪ್ರಕರಣದ ಇತ್ಯರ್ಥವಾದ  ನಂತರ  ಸರ್ಕಾರಕ್ಕೆ  ನೌಕರನಿಂದ ಉಂಟಾದ
ಆರ್ಥಿಕ  ನಷ್ಟ  ಪರಿಹಾರಾರ್ಥವಾಗಿ  ಹಣದ  ವಸೂಲಾತಿಯೂ ಅಗತ್ಯವಿರುವುದೆಂಬ  ಸಾಧ್ಯತೆಯು  ಅರಿವು  ಉಂಟಾದಲ್ಲಿ  ನೌಕರನಿಗೆ  ಪಾವತಿಮಾಡಬಹುದಾದ ರಜೆಯ  ಸಂಬಳದ  ಪೂರ್ಣ  ಮೊಬಲಗು  ಅಥವಾ  ಭಾಗಾಂಶವನ್ನು  ತಡೆಹಿಡಿದು, ಪ್ರಕರಣದ  ಇತ್ಯರ್ಥವಾದ  ನಂತರ,  ನೌಕರನಿಂದ  ವಸೂಲ್ಮಾಡಬೇಕಾದ ಹಣವನ್ನು  ಹೊಂದಾಣಿಕೆ  ಮಾಡಿ, ಉಳಿದ  ಮೊಬಲಗನ್ನು  ಪಾವತಿಮಾಡಬೇಕು.
(ನಿಯಮ 118(a) (2)
      ನಿವೃತ್ತಿ  ಅವಧಿಯ  ನಂತರ  ನೌಕರನ  ಸೇವೆಗೆ  ನೇಮಕಾತಿಯಾಗಿದ್ದಲ್ಲಿ,  ನೌಕರನು   ನಿವೃತ್ತಿ  ದಿನಾಂಕದಲ್ಲಿ
ಲೆಕ್ಕದಲ್ಲಿ  ಹೊಂದಿದ್ದ  ಗಳಿಕೆ  ರಜೆ ಮತ್ತು ಪುನರ್  ನೇಮಕಾತಿ ಅವಧಿಯಲ್ಲಿ  ಗಳಿಸಿದ  ರಜೆಯನ್ನು  ಒಟ್ಟು  ಗರಿಷ್ಠ 300  ದಿನಗಳು  ಮಿತಿಗೊಳಪಟ್ಟು  ನಿಯಮ  118 (a) (1) ಪ್ರಕಾರ  ರಜೆ  ಸಂಬಳವನ್ನು  ಪಾವತಿಮಾಡಬಹುದು.
     ನಿಯಮ  285  ರನ್ವಯ  ಸ್ವಇಚ್ಛೆ  ಮೇರೆ  ಸೇವೆಯಿಂದ  ನಿವೃತ್ತಿ  ಹೊಂದುವ  ಕ.ಸಿ.ಸೇ  (ವ.ನಿ.ಮೇ) ನಿಯಮ 1957ರ ಪ್ರಕಾರ  ವಿಚಾರಣೆಯ ನಂತರ  ಸೇವೆಯಿಂದ  ಕಡ್ಡಾಯವಾಗಿ ನೌಕರರನ್ನು  ನಿವೃತ್ತಿಗೊಳಿಸಿ, ಅಂತಹ  ಪ್ರಕರಣದಲ್ಲಿ  ನಿಯಮ 218  ರನ್ವಯ  ನಿವೃತ್ತಿ  ವೇತನ  ಮತ್ತು  ಉಪದಾನದಲ್ಲಿ  ಕಡಿಮೆಗೊಳಿಸುವ  ದಂಡನೆ  ವಿಧಿಸದಿದ್ದಲ್ಲಿ, ದೈಹಿಕ ಅಥವಾ
ಮಾನಸಿಕ  ವಿಕಲತೆಯಿಂದಾಗಿ  ವೈದ್ಯಕೀಯ  ಅಧಿಕಾರಿಯ ವರದಿಯನ್ನು  ಆಧರಿಸಿ  ಸೇವೆಗೆ  ಅನರ್ಹವೆಂದು  ಸೇವೆ
ಯಿಂದ  ವಿಕಲತಾ  ನಿವೃತ್ತಿ  ಪಡೆಯುವ  ನೌಕರ  ಮತ್ತು  ಸೇವಾವಧಿಯಲ್ಲಿ  ಮೃತಹೊಂದಿದ ಸರ್ಕಾರಿ  ನೌಕರರ  ಕುಟುಂಬಕ್ಕೂ  ಗರಿಷ್ಟ 300  ದಿನಗಳ  ಮಿತಿಗೊಳಪಟ್ಟು  ಗಳಿಕೆ  ರಜೆ  ಸಂಬಳವನ್ನು  ಪಾವತಿ  ಮಾಡಬಹುದು.
ಅರ್ಧವೇತನ  ರಜೆ  ( ನಿಯಮ 114 )
      -  ಪ್ರತಿ  ಅರ್ಧವರ್ಷದ  ಪ್ರಾರಂಭದಲ್ಲಿ  10  ದಿನಗಳ
          ರಜೆ  ಲೆಕ್ಕಕ್ಕೆ  ಜಮೆ.
           -  ಅರ್ಧವರ್ಷದ  ಮಧ್ಯದ  ಅವಧಿಯಲ್ಲಿ  ಸೇವೆಯ
         ಪ್ರಾರಂಭ / ಅಂತ್ಯಗೊಂಡರೆ  ಪ್ರತಿ  18  ದಿನಗಳ
         ಸೇವಾವಧಿಗೆ  ಒಂದು  ದಿನದ  ರಜೆ.
      -  ಕರ್ತವ್ಯವಲ್ಲದ  ಪ್ರತಿ  18  ದಿನಗಳ  ಅವಧಿಗೆ
          ಒಂದು  ದಿನದ  ರಜೆ ಮುಂದಿನ  ಅರ್ಧವರ್ಷದ
          ಅವಧಿಯಲ್ಲಿ ಲೆಕ್ಕಕ್ಕೆ  ನೀಡುವಾಗ  ಮಿತಿಗೊಳಿಸುವುದು.
      -   ಲೆಕ್ಕದಲ್ಲಿ  ಹೊಂದಿರಬಹುದಾದ  ಅವಧಿಗೆ
          ಗರಿಷ್ಟ  ಮಿತಿಯಿರುವುದಿಲ್ಲ. ( ನಿ. 114 ).
     ಅರ್ಧವೇತನ  ರಜೆಯನ್ನು  ಒಂದು  ಕ್ಯಾಲೆಂಡರ್  ವರ್ಷದಲ್ಲಿ  ಎರಡು ಕಂತುಗಳಲ್ಲಿ ಪ್ರತಿ  ಜುಲೈ ಹಾಗೂ ಜನವರಿ  ಒಂದರಂದು  ಮುಂಗಡವಾಗಿ  10  ದಿನಗಳ  ಅರ್ಧವೇತನ  ರಜೆಯನ್ನು  ಜಮೆ  ಮಾಡತಕ್ಕದ್ದು.
     ಅರ್ಧವೇತನ  ರಜೆ  ಒಂದು  ಅರ್ಧ  ವರ್ಷದಲ್ಲಿ  ಪೂರಕಗೊಂಡ  ಪ್ರತಿಯೊಂದು  ಕ್ಯಾಲೆಂಡರ್ 5/3 ದಿನ ದರದಲ್ಲಿ  ಜಮೆ  ಮಾಡಬಹುದು.
ಉದಾ:- ದಿನಾಂಕ: ೧೦/೩/೨೦೦೮ ರಂದು  ಸೇವೆಗೆ ಸೇರಿದ ನೌಕರನಿಗೆ ದಿನಾಂಕ ೧೦/೩/೨೦೦೮ ರವರೆಗೆ ಅವಧಿಗೆ ಪೂರ್ಣಗೊಂಡ  ೩  ತಿಂಗಳ ಸೇವೆಗೆ ೩*೫/೩=೫ ದಿನಗಳು  ಲೆಕ್ಕಕ್ಕೆ ನೀಡಿಕೆ.
ಉದಾ:- ದಿನಾಂಕ: ೪/೯/೨೦೦೮ ರಂದು  ನಿವೃತ್ತಿ  ಹೊಂದುವ ನೌಕರನಿಗೆ ದಿನಾಂಕ ೧/೭/೨೦೦೮ ರವರೆಗೆ ಅವಧಿಗೆ  ೩  ತಿಂಗಳ  ಅವಧಿಗೆ  ೩*೫/೩=೫  ದಿನಗಳು  ಲೆಕ್ಕಕ್ಕೆ ನೀಡಿಕೆ.
ಪರಿವರ್ತಿತ  ರಜೆ
      -  ನೌಕರನ  ಲೆಕ್ಕದಲ್ಲಿರುವ  ಅರ್ಧವೇತನ  ರಜೆಯನ್ನು
         ಪೂರ್ಣ  ವೇತನ / ಭತ್ಯೆಗೆ  ಲೆಕ್ಕದಲ್ಲಿ
         ಮಿತಿಗೊಳಿಸುವುದು.
      - ಪರಿವರ್ತಿತ  ರಜೆಯ  ನಂತರ  ಸೇವೆಗೆ  ಹಾಜರಾಗದಿದ್ದಲ್ಲಿ, ಪೂರ್ಣ  ಅವಧಿ ಅರ್ಧವೇತನ  ರಜೆ ಎಂದು
         ಪರಿಗಣನೆ,  ಹೆಚ್ಚಿನ  ವೇತನ  ಸರ್ಕಾರಕ್ಕೆ
          ಮರುಪಾವತಿ.
      -  ರಜೆಯ  ಅವಧೀಯಲ್ಲಿ  ನೌಕರನ  ಮರಣ ಅಥವಾ
          ಅನಾರೋಗ್ಯ  ಕಾರಣ  ಸ್ವಯಂ  ನಿವೃತ್ತಿ
          ಹೊಂದಿದ್ದಲ್ಲಿ  ವೇತನ  ಕಟಾಯಿಸುವುದರಿಂದ
          ವಿನಾಯಿತಿ ( ನಿ. 114 ).
      ಒಬ್ಬ  ಸರ್ಕಾರಿ  ನೌಕರನು  ಪರಿವರ್ತಿತ  ರಜೆಯನ್ನು  ಉಪಯೋಗಿಸಿದ್ದರೆ - ಪರಿವರ್ತಿತ  ರಜೆಯರೆಡರಷ್ಟು  ಅರ್ಧ  ವೇತನ  ರಜೆ  ಲೆಕ್ಕದಲ್ಲಿ ಕಳೆಯಬೇಕು.
ಉದಾ:- ೩೦/೬/೨೦೦೭ ರಂದು  ಅಂತ್ಯಕ್ಕೆ ೨೨೮  ಅರ್ಧ  ವೇತನದ   ೧/೩/೦೭  ರಿಂದ  ೨೦/೩/೦೭  ರವರೆಗೆ  ೨೦  ದಿನಗಳು  ಪರಿವರ್ತಿತ  ರಜೆ  ಉಪಯೋಗಿಸಿಕೊಂಡರೆ  ೨೦*೨ = ೪೦  ದಿನಗಳು  ಅರ್ಧ  ವೇತನ  ರಜೆಯಿಂದ  ಕಳೆಯುವುದು.  ಉಳಿಕೆ  ೨೨೮-೨೦*೨=೧೧೮  ದಿನಗಳು.
        -   ಅರ್ಧವೇತನ  ರಜಕ್ಕೆ  ಗರಿಷ್ಟ  ಮಿತಿಯಿಲ್ಲ.
        -   ಈ  ರಜೆಯನ್ನು  ನಗಧೀಕರಿಸುವಂತಿಲ್ಲ.
ಹಕ್ಕಿನಲ್ಲಿಲ್ಲದ  ರಜೆ  ನಿಯಮ  114 (6)
       ಹಕ್ಕಿನಲ್ಲಿ  ಯಾವುದೇ  ರಜೆ  ಹೊಂದಿಲ್ಲದಿದ್ದರೆ,  ಸೇವಾವಧಿಯಲ್ಲಿ  ಮುಂದೆ  ಅರ್ಜಿಸುವ  ಅರ್ಧವೇತನ  ರಜೆ  ಮುಂಗಡವಾಗಿ  ಮಂಜೂರಾತಿ.
      -  ರಜೆಯ  ನಂತರ  ಸೇವೆಗೆ  ಹಿಂದಿರುಗುವ
         ಸಾದ್ಯತೆಯಿರಬೇಕು.
         -  ಮಂಜೂರ‍್ಮಾಡಿದ  ರಜೆ  ಸೇವೆಯಲ್ಲಿ  ಅರ್ಜಿಸುವ
         ಭರವಸೆಯಿರಬೇಕು.
     -   ರಜೆಯ  ಅವಧಿಯಲ್ಲಿ  ಅರ್ಧವೇತನ  ಮತ್ತು
         ಭತ್ಯೆ  ಮಾತ್ರ  ಪಾವತಿ.
     -   ಗರಿಷ್ಟ ಸೇವಾವಧಿಯಲ್ಲಿ  360  ದಿನಗಳು,
          ಏಕಕಾಲದಲ್ಲಿ  ಗರಿಷ್ಟ  90  ದಿನ.
     -   ದೀರ್ಘಕಾಲದ  ಖಾಯಿಲೆಗಳ  ಕಾರಣ  ಏಕಕಾಲ
          ದಲ್ಲಿ  ಗರಿಷ್ಟ  180  ದಿನ.
     -   ಒಂದು  ವರ್ಷಕ್ಕೆ  ಕಡಿಮೆಯಿಲ್ಲದೆ  ನಿರಂತರ
          ಸೇವೆ  ಪೂರ್ಣಗೊಳಿಸಿರಬೇಕು.
ಅಸಾಧಾರಣ  ರಜೆ  (ನಿಯಮ  117 )
     ವಿಶೇಷ  ಸಂದರ್ಭದಲ್ಲಿ,  ನೌಕರನ  ಹಕ್ಕಿನಲ್ಲಿ ಯಾವುದೇ  ರಜೆ  ಲಭ್ಯವಿಲ್ಲದಿದ್ದಲ್ಲಿ, ಅಥವಾ  ನೌಕರನ  ಕೋರಿಕೆ  ಮೇರೆ ವಿಶೇಷ  ವೇತನ  ರಹಿತ  ರಜೆ  ನೀಡಬಹುದು.
     -  ವೇತನ  ಮತ್ತು  ಭತ್ಯೆ  ಲಭ್ಯವಿರುವುದಿಲ್ಲ.
        ( ನಿ. 171 ರನ್ವಯ  ಮ.ಭಾ.ಭತ್ಯೆ  ಪಾವತಿ )
     -  ಏಕಕಾಲದಲ್ಲಿ  ಗರಿಷ್ಟ 90  ದಿನಗಳು, ಧೀರ್ಘಕಾಲದ
         ಖಾಯಿಲೆಯ ಕಾರಣ  ಗರಿಷ್ಟ  180  ದಿನಗಳು,
         ಸೇವಾವಧಿಯಲ್ಲಿ  ಗರಿಷ್ಟ  3 ವರ್ಷ.
       -  ನೇಮಕ  ಪ್ರಾಧಿಕಾರದಿಂದ  ಪೂರ್ವ  ಅನುಮತಿ
          ಪಡೆದುಕೊಂಡು  ಉನ್ನತ  ವ್ಯಾಸಂಗಕ್ಕೆ  ತೆರಳಲು
          2 ವರ್ಷ, ಡಾಕ್ಟರೇಟ್  ಪದವಿಗಾಗಿ  3  ವರ್ಷ.
          (ನಿ. 117)
ಪರೀಕ್ಷೆ  ರಜೆ  (ನಿಯಮ  130  ರಿಂದ  134 a)
       ಹುದ್ದೆಗೆ  ನಿಗದಿತ  ಇಲಾಖಾ  ಪರೀಕ್ಷೆಗಳ  ಹಾಜರಾತಿ
       ಗಾಗಿ  ಪರೀಕ್ಷೆ  ರಜೆ ನೀಡಬಹುದು.
      -  ವಾ.ವೇ. ಬಡ್ತಿ  ಮತ್ತು  ಪದೋನ್ನತಿ  ಪಡೆಯಲು
         ಕಡ್ಡಾಯವೆಂದು ನಿಗದಿತ ಇಲಾಖಾ ಪರೀಕ್ಷೆಗಳಿಗೆ
         ಮಾತ್ರ  ಅನ್ವಯ.
      -  ಎರಡು  ಪ್ರಯತ್ನಗಳಿಗೆ  ಮಾತ್ರ  ಅವಕಾಶ ಲಭ್ಯ.
      -  ಪರೀಕ್ಷೆಗೆ  ಹಾಜರಾದ  ಪ್ರಮಾಣ  ಪತ್ರ
          ಒದಗಿಸಬೇಕು.
      -  ಸೇವಾವಹಿಯಲ್ಲಿ  ರಜೆ  ಮಂಜೂರಾತಿ
           ದಾಖಲಿಸಬೇಕು.
      -  ಬಟವಾಡೆ  ಅಧಿಕಾರಿಯಿಂದ  ಮಂಜೂರಾತಿ
         ಪಡೆದುಕೊಳ್ಳಬೇಕು.
ಹೆರಿಗೆ  ರಜೆ  (ನಿಯಮ  135 ಮತ್ತು 135a)
      ಒಂದಕ್ಕಿಂತ  ಹೆಚ್ಚಿನ ಜೀವಂತ  ಮಕ್ಕಳನ್ನು ಹೊಂದಿರದ  ಮಹಿಳಾ ಸರ್ಕಾರಿ ನೌಕರರುಗಳಿಗೆ  ಎರಡು ಮಕ್ಕಳ  ಸಂದರ್ಭದಲ್ಲಿ  ಮಾತ್ರ  ಅರ್ಹತೆ.
            - ಗರಿಷ್ಟ  180  ದಿನಗಳು.
      -  ಬಟವಾಡೆ  ಅಧಿಕಾರಿ  ಮಂಜೂರಾತಿ  ಪ್ರಾಧಿಕಾರಿ.
      -  180  ದಿನಗಳ ಅವಧಿ  ಅವಿರತವಾಗಿ  ಉಪಯೋಗ.
      -  ಇತರೇ  ಹಕ್ಕಿನ  ರಜೆಯೊಂದಿಗೆ  ವೈದ್ಯಕೀಯ
         ಕಾರಣದ  ಮೇಲೆ  ಸಂಯೋಜಿಸಿ ಬಳಕೆ.
      -  ಗರ್ಭಪಾತವಾದ  ಸಂದರ್ಭದಲ್ಲಿ  ವೈದ್ಯಕೀಯ
         ಪ್ರಮಾಣ ಪತ್ರ  ಆಧರಿಸಿ  ಗರಿಷ್ಟ   6 ವಾರಗಳ ರಜೆ.
         (ನಿ.135a)
ಪಿತೃತ್ವ  ರಜೆ  ( ನಿಯಮ 135 ಬಿ )
   -  ಸರ್ಕಾರಿ  ನೌಕರನಿಗೆ, ಪತ್ನಿಯ ಹೆರಿಗೆ  ಸಂದರ್ಭದಲ್ಲಿ
      ನೆರವು  ನೀಡಲು  ಗರಿಷ್ಟ 15  ದಿನಗಳ  ಪಿತೃತ್ವ  ರಜೆ
      ಲಭ್ಯ. ಇದು  ಎರಡು ಮಕ್ಕಳ  ಸಂದರ್ಭಕ್ಕೆ  ಮಾತ್ರ
      ಅನ್ವಯ.
ವಿಶೇಷ  ದುರ್ಬಲತೆ  ರಜೆ  (ನಿಯಮ  136  ರಿಂದ  138)
      ನೌಕರನಿಗೆ  ಕರ್ತವ್ಯದ  ಅವಧಿಯಲ್ಲಿ ಉಂಟಾದ ದೈಹಿಕ ವಿಕಲತೆ ಅಥವಾ  ಮಾನಸಿಕ ಅಸ್ವಸ್ಥತೆಗಾಗಿ ಘಟನಾವರದಿ  ಹಾಗೂ  ವೈದ್ಯಕೀಯ   ಮಂಡಳಿ  ನೀಡುವ
ಪ್ರಮಾಣ  ಪತ್ರ  ಆಧರಿಸಿ  ನೀಡಲಾಗುವುದು.
    -  ಗರಿಷ್ಟ  24 ತಿಂಗಳಾವಧಿ.
    -  ಮೊದಲ  4  ತಿಂಗಳ  ರಜೆ  ಅವಧಿಯಲ್ಲಿ  ಪೂರ್ಣ
        ವೇತನ / ಭತ್ಯೆ  ಪಾವತಿ.
    -  4  ತಿಂಗಳ  ನಂತರದ  ಅವಧಿಗೆ  ಅರ್ಧವೇತನ ರಜೆ
        ಅವಧಿಯ ವೇತನ / ಭತ್ಯೆ ಲಭ್ಯ.
    -  ಮಂಜೂರಾತಿ ಪ್ರಾಧಿಕಾರಿ - ಸರ್ಕಾರ. (ನಿ. 136-138)
ರಜೆ  ಅವಧಿಯಲ್ಲಿ  ವೇತನ  ಭತ್ಯೆಗಳು (ನಿ.118)
ಗಳಿಕೆ  ರಜೆ -  ಪ್ರಾರಂಭದ  ನಿಕಟ ಪೂರ್ವದಲ್ಲಿ ಪಡೆಯುತ್ತಿದ್ದ
               ಸಮಾನ  ವೇತನ  ಮತ್ತು ಭತ್ಯೆಗಳು.
ಅರ್ಧವೇತನ  ರಜೆ -  ರಜೆಯ  ಪ್ರಾರಂಭದ  ಪೂರ್ವದಲ್ಲಿ
                    ಪಡೆಯುತ್ತಿದ್ದ  ಮೂಲವೇತನ  ಮತ್ತು
                    ಅದಕ್ಕನುಗುಣವಾಗಿ  ಭತ್ಯೆಗಳು.
ಪರಿವರ್ತಿತ  ರಜೆ  -  ಗಳಿಕೆ  ರಜೆ  ಪಡೆಯಬಹುದಾದ
                    ದರದಲ್ಲಿ  ವೇತನ  ಮತ್ತು  ಭತ್ಯೆಗಳು
                    (ಷರತ್ತಿಗೊಳಪಟ್ಟು).
ಹಕ್ಕಿನಲ್ಲಿಲ್ಲದ  ರಜೆ    ಅರ್ಧ  ವೇತನ  ರಜೆ  ಸಂದರ್ಭದಲ್ಲಿ
                   ಪಡೆಯಬಹುದಾದ ವೇತನ / ಭತ್ಯೆಗಳು.
ಅಸಾಧಾರಣ  ರಜೆ  -  ವೇತನ : ಭತ್ಯೆ ಲಭ್ಯವಿರುವುದಿಲ್ಲ,
                     ಆದರೆ ನಿ. 171ರ ಷರತ್ತಿಗೊಳಪಟ್ಟು
                     ಮ.ಬಾ.ಭತ್ಯೆ : ನ. ಪ. ಭತ್ಯೆ
                     ಪಾವತಿಸಬಹುದು.
ಹೆರಿಗೆ  ರಜೆ     -    ಗಳಿಕೆ  ರಜೆ  ಅವಧಿಯಲ್ಲಿ  ಪಡೆಯ
                    ಬಹುದಾದ  ವೇತನ : ಭತ್ಯೆಗಳು.
ವಿಶೇಷ  ದುರ್ಬಲತೆ  ರಜೆ _  ಮೊದಲ  4 ತಿಂಗಳ  ಅವಧಿಗೆ
                           ಗಳಿಕೆ ರಜೆ ಅವಧಿಯಲ್ಲಿ ಪಡೆಯ
                          ಬಹುದಾದ  ವೇತನ : ಭತ್ಯೆಗಳು,
                           ನಂತರ ಅವಧಿಗೆ ಅರ್ಧವೇತನ
                           ರಜೆಯ ಅವಧಿಯ ವೇತನ :
                           ಭತ್ಯೆಗಳು.
ಗಳಿಕೆ  ರಜೆ  - 120  ದಿನಗಳು, ಗೆಜೆಟೆಡ್  ಅಧಿಕಾರಿಗಳಿಗೆ
              ವಿದೇಶಿ ಪ್ರಯಾಣಕ್ಕೆ  180  ದಿನಗಳು.
            - ನಿವೃತ್ತಿ  ಪೂರ್ವ  300  ದಿನಗಳು.
ಪರಿವರ್ತಿತ  ರಜೆ  -  120  ದಿನಗಳು,  ಇತರೆ  ರಜೆ
           ಗಳೊಂದಿಗೆ  ಸಂಯೋಜಿಸಿದರೆ  180  ದಿನಗಳು.
ಹಕ್ಕಿನಲ್ಲಿಲ್ಲದ  ರಜೆ  -  90  ದಿನಗಳು,  ವೈದ್ಯಕೀಯ
                    ಕಾರಣದ  ಮೇರೆ  180  ದಿನಗಳು,
                    ಸೇವಾವಧಿಯಲ್ಲಿ  360  ದಿನಗಳು.
ಅಸಾಧಾರಣ  ರಜೆ  -  90  ದಿನಗಳು, ವೈದ್ಯಕೀಯ
                     ಕಾರಣದ  ಮೇರೆ  180  ದಿನಗಳು,
                     ದೀರ್ಘ  ಅವಧಿಯ  ಶುಶ್ರೂಷೆಯ
                     ರೋಗಿಗಳಿಗೆ  18  ತಿಂಗಳು.
                     ಸೇವಾವಧಿಯಲ್ಲಿ  ಉನ್ನತ ವ್ಯಾಸಂಗ
                     ಕ್ಕಾಗಿ  3  ವರ್ಷಗಳು.
ಹೆರಿಗೆ  ರಜೆ   -  180  ದಿನಗಳು.
ವಿಶೇಷ  ದುರ್ಬಲತೆ  ರಜೆ  -  24  ತಿಂಗಳು.
ಮಂಜೂರಾತಿ  ಅಧಿಕಾರ (ನಿ. 192) ವಿಶೇಷ  ದುರ್ಬಲತೆಯ  ರಜೆ  ಹೊರತುಪಡಿಸಿ, ಇತರೇ  ರಜೆ  ಮಂಜೂರ‍್ಮಾಡುವ  ಸಕ್ಷಮ  ಪ್ರಾಧಿಕಾರವೆಂದರೆ.
___________________________________
ಪ್ರಾಧಿಕಾರ      ರಜೆ  ಮಂಜೂರ‍್ಮಾಡಬಹುದಾದ ನೌಕರರ ಹುದ್ದೆಯ ವೇತನ ಶ್ರೇಣಿ
               ರೂ. ೭೪೦೦-     ರೂ. ೫೫೭೫  ೧೦೬೨೦     ರೂ. ೨೫೦೦ -  ೩೮೫೦
                  ೩೧೨೦  ಮತ್ತು       ಮತ್ತು ಹೆಚ್ಚು ಆದರೆ          ಮತ್ತು  ಹೆಚ್ಚು  ಆದರೆ
                  ಹೆಚ್ಚು             ರೂ. ೭೪೦೦-೧೩೧೨೦ಕ್ಕೆ        ರೂ. ೫೫೭೫  ೧೦೨೬ಕ್ಕೆ
                                           ಕಡಿಮೆ                     ಕಡಿಮೆ
___________________________________
 ೧.  ಇಲಾಖಾ  ಮುಖ್ಯಾಧಿಕಾರಿಗಳು        ೪ ತಿಂಗಳು     ೬  ತಿಂಗಳು    ಪೂರ್ಣಅಧಿಕಾರ
 ೨.  ವಿಭಾಗ  ಮಟ್ಟದ  ಅಧಿಕಾರಿಗಳು      ೩ ತಿಂಗಳು     ೪  ತಿಂಗಳು    ಪೂರ್ಣಅಧಿಕಾರ
 ೩.  ಜಿಲ್ಲಾ  ಮಟ್ಟದ  ಅಧಿಕಾರಿಗಳು       ೨  ತಿಂಗಳು     ೩  ತಿಂಗಳು    ಪೂರ್ಣಅಧಿಕಾರ
 ೪. ಉಪವಿಭಾಗ ಮಟ್ಟದ  ಅಧಿಕಾರಿಗಳು   ೨  ತಿಂಗಳು     ೨  ತಿಂಗಳು    ಪೂರ್ಣಅಧಿಕಾರ
 ೫.  ತಾಲ್ಲೂಕು ಮಟ್ಟದ  ಅಧಿಕಾರಿಗಳು    ೨  ತಿಂಗಳು     ೨  ತಿಂಗಳು    ಪೂರ್ಣಅಧಿಕಾರ
___________________________________
ಕಾರ್ಯವಿಧಾನ
     ರಜೆ  ಮಂಜೂರಾತಿ  ಕೋರಿ  ನಮೂನೆ  1  ರಲ್ಲಿ,
      ಪೂರ್ವಭಾವಿಯಾಗಿ  ಅರ್ಜಿ  ಸಲ್ಲಿಸಬೇಕು.
     ಗೆಜೆಟೆಡ್ ಅಧಿಕಾರಿಗಳು  ಕನಿಷ್ಟ  ಒಂದು ತಿಂಗಳು
      ಮುಂಚಿತವಾಗಿ  ದ್ವಿಪ್ರತಿಯಲ್ಲಿ  ಅರ್ಜಿ ನೀಡಿಕೆ.
    ವೈದ್ಯಕೀಯ  ಕಾರಣದ  ಮೇರೆ  ರಜೆ  ಕೋರಿದಲ್ಲಿ
      ಸಕ್ಷಮ  ವೈದ್ಯಾಧಿಕಾರಿಯಿಂದ  ಪ್ರಮಾಣ  ಪತ್ರ.
          (ನಿ. 187)
( * ಸಕ್ಷಮ  ವೈದ್ಯಕೀಯ  ಪ್ರಾಧಿಕಾರಿಗಳು )
-   ನೌಕರರಿಗೆ  ಚಿಕಿತ್ಸೆ  ನೀಡಿದ  ವೈದ್ಯಕೀಯ ಚಿಕಿತ್ಸಕ   ವೈದ್ಯ,
     ಹಕೀಮ್, - ಗರಿಷ್ಟ  15 ದಿನಗಳ  ಅವಧಿ.
-    ವೈದ್ಯಕೀಯ  ಕೌನ್ಸಿಲ್ನಲ್ಲಿ ನೋಂದಾಯಿತ    ವೈದ್ಯಕೀಯ
     ಸಲಹೆಗಾರರು  ಗರಿಷ್ಟ  2  ತಿಂಗಳು.
-    ಅಂಗೀಕೃತ  ವೈದ್ಯಕೀಯ  ಪದವಿಹೊಂದಿದ, ನೋಂದಾಯಿತ
     ವೈದ್ಯಕೀಯ  ಅಧಿಕಾರಿ -  ಗರಿಷ್ಟ  6 ತಿಂಗಳು. )
    ಮಂಜೂರಾತಿ  ಪ್ರಾಧಿಕಾರಿ ಅಗತ್ಯವೆಂದು  ಪರಿಗಣಿಸಿ
     ದಲ್ಲಿ  6  ತಿಂಗಳ  ಅವಧಿ  ಮೀರಿದ  ರಜೆ ಮಂಜೂ
     ರಾತಿ  ಕೋರಿ  ವೈದ್ಯಕೀಯ  ಪ್ರಮಾಣ ಪತ್ರ
     ಹಾಜರ‍್ಪಡಿಸಿದ್ದಲ್ಲಿ  ಜಿಲ್ಲಾ ವೈದ್ಯಾಧಿಕಾರಿಯಿಂದ
     ಮೇಲುಸಹಿ  ಪಡೆಯಲು  ಸೂಚಿಸಬಹುದು.
    ಪತ್ರಾಂಕಿತರಲ್ಲದ  ಸಿಬ್ಬಂದಿಗೆ  ಮಂಜೂರಾತಿ
     ಪ್ರಾಧಿಕಾರಿ  ನೌಕರರ  ಸೇವಾದಾಖಲೆ  ಪರಿಶೀಲಿಸಿ
     ರಜೆ  ಲಭ್ಯತೆಯಾಧಾರದ  ಮೇಲೆ ಮಂಜೂರಾತಿ
     ನೀಡಿ ಆದೇಶ ( ನಿ. 195 ).
   ಮಹಾಲೇಖಪಾಲಕರಿಂದ  ರಜೆ  ಲಭ್ಯತೆ
    ದೃಢೀಕರಣ  ಸ್ವೀಕೃತಿ  ನಂತರ  ಸಕ್ಷಮ
    ಪ್ರಾಧಿಕಾರಿಯಿಂದ  ಮಂಜೂರಾತಿ  (ನಿ.192).
   ಪರಿವೀಕ್ಷಣ  ಅವಧಿಯ  ನೌಕರರು  ತಾತ್ಕಾಲಿಕ
    ನೌಕರರು ರಜೆಗೆ  ಅರ್ಹರು  ( ನಿ.145 ).
   ಅರೆಕಾಲಿಕ  ಸರ್ಕಾರಿ  ನೌಕರರು  ಸಾಂದರ್ಭಿಕ
    ರಜೆ ಹೊರತುಪಡಿಸಿ, ಇತರೇ ರಜೆಗೆ  ಅರ್ಹರಲ್ಲ
    ( ನಿ. 147 ).
   ದುರ್ನಡತೆಗಾಗಿ  ಶಿಸ್ತು  ಪ್ರಾಧಿಕಾರಿಯಿಂದ
    ಕಠಿಣ  ದಂಡನೆಗೊಳಪಡಿಸಲು ನಿರ್ಧರಿಸಿರುವ
    ನೌಕರರು  ರಜೆ  ಮಂಜೂರಾತಿಗೆ  ಅರ್ಹರಲ್ಲ
    ( ನಿ. 144 ).
   ಷರತ್ತಿಗೊಳಪಟ್ಟು,  ರಜೆಯನ್ನು ಸಾರ್ವಜನಿಕ
     ರಜಾ  ದಿನಗಳೊಂದಿಗೆ  ಸಂಯೋಜಿಸಲು
     ಅನುಮತಿಸಬಹುದು.
    ವೈದ್ಯಕೀಯ  ಕಾರಣದ ಮೇರೆ  ರಜಾ
      ಮಂಜೂರಾತಿ  ಪಡೆದ  ನೌಕರರು,
           ಕರ್ತವ್ಯಕ್ಕೆ  ಹಾಜರಾಗಲು,  ವೈದ್ಯಕೀಯವಾಗಿ
           ಸೇವೆ  ಮುಂದುವರಿಸಲು  ಅರ್ಹರೆಂದು
           ವೈದ್ಯಾಧಿಕಾರಿಯಿಂದ  ಪ್ರಮಾಣಪತ್ರ
           ಹಾಝರ‍್ಪಡಿಸುವುದು  ಅಗತ್ಯ. ( ನಿ. 160 ).
   ರಜಾ  ಮಂಜೂರಾತಿ  ಪಡೆದು, ರಜಾ  ಅವಧಿ
    ಯಲ್ಲಿರುವ  ನೌಕರರನ್ನು ಸಾರ್ವಜನಿಕ  ಹಿತಾ
    ಸಕ್ತಿಯಿಂದ ಕರ್ತವ್ಯಕ್ಕೆ ಹಾಜರಾಗುವಂತೆ
    ಕರೆಪತ್ರ ನೀಡಬಹುದು.  ( ನಿ. 161 ).
   ಸಾಂದರ್ಭಿಕ  ರಜೆ  ಹೊರತು ಪಡಿಸಿ, ನೌಕರರ
    ಹಕ್ಕಿನಲ್ಲಿರುವ ಯಾವುದೇ  ರಜೆ  ಸಂಯೋಜಿಸಿ
    ಮಂಜೂರಾತಿಗೆ  ಅರ್ಹರು  ( ನಿ. 165 ).
   ರಜೆ  ಲಭ್ಯತೆ  ಷರತ್ತಿಗೊಳಪಟ್ಟು, ಈಗಾಗಲೇ
    ಉಪಯೋಗಿಸಿಕೊಂಡ  ರಜೆಯನ್ನು  ಇತರೇ
    ರಜೆಗಳೆಂದು  ಪರಿವರ್ತಿಸಲು  ಅವಕಾಶವಿದೆ.
    ( ನಿ. 165 ).
      ರಜೆ   ವೇತನ
  *  ರಜೆ  ಅವಧಿಯಲ್ಲಿ  ನೌಕರರಿಗೆ  ಆಯಾ  ಮಾಹೆಯ
     ಅಂತ್ಯದಲ್ಲಿ  ರಜೆ  ವೇತನ  ಪಾವತಿ  ( ನಿ. 197 ).
  *  ಪತ್ರಾಂಕಿತ  ಅಧಿಕಾರಿಗಳು  ರಜಾ  ವೇತನವನ್ನು,  ರಜೆ
     ಪೂರ್ವಾವಧಿಯಲ್ಲಿ  ವೇತನ ಪಡೆಯುತ್ತಿದ್ದ  ಖಜಾನೆಯಲ್ಲಿ
     ಪಡೆಯಲು  ಅರ್ಹರು. ( 120  ದಿನಗಳ  ರಜೆ  ಮೀರಿದ
     ಅವಧಿಗೆ  ಮಹಾಲೇಖಪಾಲಕರಿಂದ  ರಜೆ  ವೇತನ
     ದೃಢೀಕರಣ  ಪತ್ರ  ಪಡೆದು  ಹಾಜರ‍್ಪಡಿಸಬೇಕು).
     ( ನಿ. 199 ).
 ರಜಾ ಮಂಜೂರಾತಿ  ವಿವೇಚನಾತ್ಮಕ ಅಧಿಕಾರ  (ನಿಯಮ 143)
     ಹೆಚ್ಚಿನ  ಸಿಬ್ಬಂದಿ  ರಜಾ  ಕೋರಿಕೆ  ಸಲ್ಲಿಸಿದ್ದು, ಸಾರ್ವಜನಿಕ  ಹಿತಾಸಕ್ತಿಯಿರುವ  ಎಲ್ಲಾ  ನೌಕರರ ಮನವಿ ಪುರಸ್ಕರಿಸಲಾಗದಿದ್ದಲ್ಲಿ,  ವಿವೇಚನಾತ್ಮಕ  ನಿರ್ಧಾರ  ಕೈಗೊಳ್ಳಲು  ಪರಿಗಣಿಸುವ  ಅಂಶಗಳು.
ಸಾರ್ವಜನಿಕ  ಹಿತದೃಷ್ಟಿಯಿಂದ
v    ಯಾವ  ನೌಕರರಿಗೆ,  ರಜಾ  ಉಪಯೋಗಿಸಿ
      ಕೊಳ್ಳಲು  ಅವಕಾಶ  ನೀಡಿಕೆ.
v    ಅರ್ಜಿದಾರರಿಗೆ  ಲಭ್ಯವಿರುವ  ರಜೆ  ಪ್ರಮಾಣ.
v    ಅರ್ಜಿದಾರರು,  ಪೂರ್ಣಗೊಳಿಸಿರುವ
      ಸೇವಾವಧಿ.
v    ಹಿಂದೆ  ರಜಾವಧಿಯಲ್ಲಿ  ಕರ್ತವ್ಯಕ್ಕೆ  ಕರೆ
     ನೀಡಿ, ರಜೆ  ಮೊಟಕುಗೊಳಿಸಲ್ಪಟ್ಟ  ನೌಕರರು.
v    ಹಿಂದೆ  ಸಾರ್ವಜನಿಕ  ಹಿತಾಸಕ್ತಿಯಿಂದ  ರಜೆ
     ತಿರಸ್ಕರಿಸಿರುವ ಸಂದರ್ಭ.
               --)(0*0)(--
>>>>

Saturday, 24 February 2018

Income Tax Calculator for the year 2017-18

DigiLocker enables digital driving licence and vehicle registration papers


ಹೆರಿಗೆ ರಜೆ- ಮೃತಪಟ್ಟ ಮಗುವಿಗೆ ಸಂಬಂಧಿಸಿದಂತೆ

*ಸರ್ಕಾರಿ ಕಾರ್ನರ್*


 Monday, 19.02.2018, 3:01 AM     ವಿಜಯವಾಣಿ ಸುದ್ದಿಜಾಲ   

ದಿನದ ಪ್ರಶ್ನೆ

ಸರ್ಕಾರಿ ನೌಕರಳಾದ ನನಗೆ 32 ವಾರ 3 ದಿನಗಳಿದ್ದಾಗ (8 ತಿಂಗಳು ತುಂಬಿ, 9ನೇ ತಿಂಗಳು ಬಂದಿದೆ) 2018ರ ಜನವರಿ 17ನೇ ತಾರೀಖು, ಸಿಸೇರಿಯನ್ ಮೂಲಕ ಮೃತಪಟ್ಟ ಹೆಣ್ಣುಮಗುವಿಗೆ ಜನ್ಮ ನೀಡಿದೆ. ಹಾಗಾದರೆ ನಾನು 6 ತಿಂಗಳ ಹೆರಿಗೆ ರಜೆಗೆ ಅರ್ಹಳೇ? ಹೆರಿಗೆ ರಜೆಗೆ ಅರ್ಹಳಾಗದಿದ್ದಲ್ಲಿ ನನ್ನ ಆರೈಕೆಗೆ ಎಷ್ಟು ದಿನಗಳ ರಜೆ ಸಿಗುತ್ತದೆ ಹಾಗೂ 6 ತಿಂಗಳ ಹೆರಿಗೆ ರಜೆ ಅನ್ವಯವಾಗುವುದಾದರೆ ಕೆ.ಸಿ.ಎಸ್.ಆರ್.ನ ಯಾವ ನಿಯಮ, ಉಪನಿಯಮ ಅನ್ವಯವಾಗುತ್ತದೆ?

| ವಾಣಿ ಕಗ್ಗಲೀಪುರ, ಬೆಂಗಳೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ಮೇರೆಗೆ 180 ದಿನಗಳ ಕಾಲ ಹೆರಿಗೆ ರಜೆ ಲಭ್ಯವಾಗುತ್ತದೆ. 1961ರ ಪ್ರಸೂತಿ ಸೌಲಭ್ಯ ಅಧಿನಿಯಮದ ಪ್ರಕರಣ 3ಬಿ ರಂತೆ 26 ವಾರಗಳ ನಂತರ ಜನನವಾಗುವ ಮಗುವು ಜೀವಂತವಿರಲಿ ಅಥವಾ ಇಲ್ಲದಿರಲಿ ಅದು ಸಾಮಾನ್ಯ ಹೆರಿಗೆ ಎಂದು ಭಾವಿಸಿ ಅಷ್ಟು ದಿನಗಳ ಕಾಲ ಹೆರಿಗೆ ರಜೆ ಸೌಲಭ್ಯ ನೀಡಬೇಕಾಗುತ್ತದೆ. ಈ ನಿಯಮದಂತೆ ನೀವು 180 ದಿನಗಳ ಕಾಲ ಹೆರಿಗೆ ರಜೆ ಸೌಲಭ್ಯ ಪಡೆದು ತದನಂತರ ಕರ್ತವ್ಯಕ್ಕೆ ಹಾಜರಾಗಬಹುದು.

ಮನೋವೈಕಲ್ಯದಿಂದ ಬಳಲುತ್ತಿದ್ದು ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿರುವ ರಾಜ್ಯ ಸರ್ಕಾರಿ ನೌಕರರಿಗೆ ಶಿಕ್ಷಣ ಭತ್ಯೆಯ ಸೌಲಭ್ಯ ಮಂಜೂರು ಮಾಡುವ ಬಗ್ಗೆ




ವಾರ್ಷಿಕ ವೇತನ ಲೆಕ್ಕಾಚಾರ

https://drive.google.com/file/d/1bAyg3PQ9iA5VIVRnfI9yNILdnUgm-4R8/view?usp=drivesdk


Just INPUT 10 points of your salary and find complete details of your Annual statement with Income Tax form 16..

ಕೇವಲ 10 ಅಂಶಗಳನ್ನು ತುಂಬಿ ವಾರ್ಷಿಕ ವೇತನ ಲೆಕ್ಕಾಚಾರ (ದಿಢೀರ್) ಮಾಡಿ..*

*Just INPUT 10 points of your salary and find complete details of your Annual statement with Income Tax form 16..*

*select Grade(
ನಿಮ್ಮ ಹುದ್ದೆಯ ದರ್ಜೆ)
**Enter Basic pay of January and February(ಜನೇವರಿ ಮತ್ತು ಫೆಬ್ರವರಿ ಮಾಹೆಗಳ ಮೂಲವೇತನ)
3) Select Month number of Annual Increment
And also Time bond(ವಾರ್ಷಿಕ/ಕಾಲಿಕ/ಸ್ಥಗಿತ ವೇತನ ಬಡ್ತಿ ಪಡೆದ ತಿಂಗಳಿನ ಕ್ರಮ ಸಂಖ್ಯೆ)
4) Select surrender taken month.(ಗಳಿಕೆ ರಜೆ ನಗದೀಕರಿಸಿದ ತಿಂಗಳಿನ ಕ್ರಮ ಸಂಖ್ಯೆ)
5) Select your city(ನಿಮ್ಮ ನಗರ ಆಯ್ಕೆ)
6) Select Teacher Category ( Primary, Secondary or PU Lecturer)(ಶಿಕ್ಷಕ ವರ್ಗ)
7) Enter SFN amount(ಕುಟುಂಬ ಕಲ್ಯಾಣ ಭತ್ಯೆ)
8) KGID
9) LIC
10) NPS /GPF


ಸಾಂದರ್ಭಿಕ ರಜೆಯ ಕುರಿತು ಕೆಲವು ಪ್ರಶ್ನೆಗಳು& ಉತ್ತರ


 *ಸರ್ಕಾರಿ ಕಾರ್ನರ್‌*

Tuesday, 13.02.2018, 3:00 AM     ವಿಜಯವಾಣಿ ಸುದ್ದಿಜಾಲ 

ಇಂದಿನ ಪ್ರಶ್ನೆ

ಪ್ರಾಥಮಿಕ ಶಾಲಾ ಪ್ರಧಾನ ಗುರುಗಳು ಸಹಶಿಕ್ಷಕರಿಗೆ ಗರಿಷ್ಠ ಎಷ್ಟು ಸಾಂರ್ದಭಿಕ ರಜೆಗಳನ್ನು ಮಂಜೂರು ಮಾಡಲು ಬರುತ್ತದೆ? ಶನಿವಾರ ಮತ್ತು ಸೋಮವಾರ ಸಾಂರ್ದಭಿಕ ರಜೆ ಹಾಕಿದ್ದರೆ ಭಾನುವಾರವೂ ಸಾಂರ್ದಭಿಕ ರಜೆಯಾಗಿ ಪರಿವರ್ತನೆಯಾಗುತ್ತದೆಯೆ?

| ಧರೆಪ್ಪ ಅಂಬಗೆರೆ, ಸುರಪುರ, ಯಾದಗಿರಿ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಅನುಬಂಧ – (ಬಿ)ಯ ನಿಯಮ (1)ರ ಪ್ರಕಾರ ಶಾಲಾ ಪ್ರಧಾನ ಗುರುಗಳು ಒಂದು ಸಲಕ್ಕೆ ಗರಿಷ್ಠ ಏಳು ದಿನಗಳಷ್ಟು ಸಾಂರ್ದಭಿಕ ರಜೆಯನ್ನು ಮಂಜೂರು ಮಾಡಬಹುದು. ಆದರೆ ಭಾನುವಾರ ಸಾರ್ವತ್ರಿಕ ರಜೆ ಆಗಿರುವುದರಿಂದ ಅದು ಸಾಂರ್ದಭಿಕ ರಜೆಯಾಗಿ ಪರಿವರ್ತನೆಯಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.

★★★★★

ಸಾಂದರ್ಭಿಕ ರಜೆಯ ಕುರಿತು ಕೆಲವು ಪ್ರಶ್ನೆಗಳು& ಉತ್ತರ

1. *ಒಂದು ವರ್ಷದಲ್ಲಿನ ಒಟ್ಟು CL ಗಳ ಸಂಖ್ಯೆ ಎಷ್ಟು?*
ಉ:-15.

2. *CLಗಳನ್ನು  ಜಮಾ ಮಾಡುವುದು* *ಕ್ಯಾಲೆಂಡರ್ ವರ್ಷಕ್ಕೊ ಅಥವಾ ಶೈಕ್ಷಣಿಕ ವರ್ಷಕ್ಕೊ?*
ಉ:-ಕ್ಯಾಲೆಂಡರ್ ವರ್ಷಕ್ಕೆ.

3. *ಉಳಿದ CL ಗಳನ್ನು ಮುಂದಿನ* *ವರ್ಷಕ್ಕೆ ಕೊಂಡೊಯ್ಯಬಹುದೆ?
ಉ:-ಇಲ್ಲ.ಉಳಿದ CL ಗಳು ವ್ಯರ್ಥ ವೇ ಸರಿ.

4. *CL ಗಳು ನಮ್ಮ ಹಕ್ಕುಗಳೇ?
ಉ:-ಯಾವ ರೀತಿಯ ರಜೆಗಳೂ ನಮ್ಮ ಹಕ್ಕುಗಳಲ್ಲ.

5. *ಶಾಲೆಗಳಲ್ಲಿ CLಮಂಜೂರು ಮಾಡುವವರು ಯಾರು?
ಉ:-ಮುಖ್ಯ ಶಿಕ್ಷಕರು.

6. *ನಿರಂತರವಾಗಿ ಎಷ್ಟು  CL   ಗಳನ್ನು ಬಳಸಬಹುದು.?*
ಉ:ನಿರಂತರವಾಗಿ 7 CL ಗಳನ್ನು ಬಳಸಬಹುದು.
* ಸಾರ್ವತ್ರಿಕ ರಜೆಗಳು ಸೇರಿದ್ದರೆ 10 CL ಗಳನ್ನು ಬಳಸಬಹುದು.

7. *ಮುಖ್ಯಶಿಕ್ಷಕರು ನಿರಂತರ ಎಷ್ಟು CL ಗಳನ್ನು ಮಂಜೂರು ಮಾಡಬಹುದು.?
ಉ:-Kcsr ನಂತೆ ನಿರಂತರ. 7 CL ಗಳನ್ನೂ ಮುಖ್ಯಶಿಕ್ಷಕರೇ ಮಂಜೂರು ಮಾಡಬಹುದು.ಆದರೆ ಇಲಾಖೆಯ ಸುತ್ತೋಲೆಯಂತೆ ನಿರಂತರ 5 CL ಗಳನ್ನು ಮುಖ್ಯಶಿಕ್ಷಕರು ಮಂಜೂರು ಮಾಡಬಹುದು.ಮತ್ತೆ ಪಡೆಯಲು ಮೇಲಾಧಿಕಾರಿಗಳ ಅನುಮತಿ ಅಗತ್ಯ.

8. *ಶನಿವಾರ CL ಪಡೆದಿದ್ದರೆ ಭಾನುವಾರವೂ CL ಆಗುತ್ತದ್ದೆಯೇ?
ಉ:- ಇಲ್ಲ.
*ಯಾವುದೇ ಸಾರ್ವತ್ರಿಕ ರಜೆಗಳಂದು CL ನಮೂದಿಸುವಂತ್ತಿಲ್ಲ.

9. *ನಿರ್ಬಂಧಿತ ರಜೆ ಯೊಂದಿಗೆ CL ಜೋಡಿಸಬಹುದೇ?*
ಉ:-ಜೋಡಿಸಿ ನಿರಂತರವಾಗಿ ಹಾಕಬಹುದು.

10. *ಡಿಸೆಂಬರ್ ತಿಂಗಳಲ್ಲಿ ಗರಿಷ್ಠ ಎಷ್ಟು CL ಗಳನ್ನು ಬಳಸಬಹುದು?
ಉ:-ಡಿಸೆಂಬರ್ ಅಥವಾ ಯಾವುದೇ ತಿಂಗಳಲ್ಲಿ ಇಂತಿಷ್ಟೆ CL ಬಳಸಬೇಕೆಂಬ ನಿಯಮವಿರುವುದಿಲ್ಲ.
* ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಆದೇಶದಂತೆ ಡಿಸೆಂಬರ್ ತಿಂಗಳಲ್ಲಿ 2 CL ಗಳನ್ನು ಮಾತ್ರ ಬಳಸಲು ಆದೇಶವಾಗಿರುತ್ತದೆ.
ಗಮನಿಸಿ ಈ ಆದೇಶ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರಿಗೆ ಮಾತ್ರ ಅನ್ವಯವಾಗುತ್ತದೆ.ಇದು ಎಲ್ಲಾ ಜಿಲ್ಲೆಯವರಿಗಲ್ಲ.ಅದರಲ್ಲೂ ಪ್ರಾಥಮಿಕ ಶಾಲೆಗಳಿಗೆ ಎಲ್ಲೂ ಆದೇಶವಾಗಿರುವುದಿಲ್ಲ,ಅನಗತ್ಯ ಗೊಂದಲ ಊಹಾಪೋಹ ಬೇಡ.

11. *ಹೊಸದಾಗಿ ಸೇವೆಗೆ ಸೇರಿದ ಶಿಕ್ಷಕರಿಗೆ CL ಹೇಗೆ ನೀಡುವುದು?
ಉ:- ಹೊಸ ಶಿಕ್ಷಕರಿಗೆ ಮುಂಗಡವಾಗಿ CL ಗಳು ದೊರಕುವುದಿಲ್ಲ.ಅವರು ಒಂದು ವರ್ಷ ಸೇವೆ ಪೂರ್ಣಗೊಳಿಸಿದ ನಂತರ ಮುಂಗಡ 15 CL ಗಳು ದೊರಕುತ್ತವೆ.ಅಲ್ಲಿಯವರೆಗೆ ಅವರು ಪ್ರತೀ ಒಂದು ತಿಂಗಳ ಪೂರ್ಣ ಸೇವೆಯ ನಂತರ 1 CL ಪಡೆಯುತ್ತಾ ಹೋಗುತ್ತಾರೆ.

12. *ಎಲ್ಲಾ 15 CL ಗಳು ಮುಗಿದ ನಂತರ ಮುಂಗಡವಾಗಿ CL ಪಡೆಯಬಹುದೆ?
ಉ:- ಇಲ್ಲ. Ml

13. *CL ಪಡೆಯಲು ಮುಖ್ಯಶಿಕ್ಷಕರ  ಪೂರ್ವಾನುಮತಿ ಅಗತ್ಯವೆ?
ಉ:- ಹೌದು.
*ಆದರೆ ಅನಾರೋಗ್ಯ, ಮತ್ತಿತರ ಬೇರೆ ಸಾಧ್ಯತೆಗಳೇ ಇಲ್ಲದ ಸಂದರ್ಭದಲ್ಲಿ ಮಾತ್ರ ವಿನಾಯಿತಿ ಇದೆ.ಆದರೆ ಪೂರಕ ದಾಖಲೆ ಒದಗಿಸಿ ಸಮಜಾಯಿಸಿ ನೀಡಬೇಕು
              〰🌺〰

ಎರಡನೇ ವಿವಾಹವಾದರೆ ನನಗೆ ಪತಿಯ ಕುಟುಂಬ ನಿವೃತ್ತಿವೇತನ ಮುಂದುವರಿಯುವುದೆ ಅಥವಾ ಇಲ್ಲವೆ?

▪▪

ಸರ್ಕಾರಿ ಕಾರ್ನರ್‌

Thursday, 22.02.2018, 3:02 AM     ವಿಜಯವಾಣಿ ಸುದ್ದಿಜಾಲ 

ದಿನದ ಪ್ರಶ್ನೆ

ನಾನು ಸರ್ಕಾರಿ ನೌಕರಳಾಗಿದ್ದು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ನಮ್ಮ ಪತಿ ನಿಧನರಾದರು. 26 ವರ್ಷದ ನನಗೆ ಮೂರು ವರ್ಷದ ಒಂದು ಹೆಣ್ಣುಮಗು ಇದೆ. ಎರಡನೇ ವಿವಾಹವಾದರೆ ನನಗೆ ಪತಿಯ ಕುಟುಂಬ ನಿವೃತ್ತಿವೇತನ ಮುಂದುವರಿಯುವುದೆ ಅಥವಾ ಇಲ್ಲವೆ?

| ಬಿ.ಎನ್. ರಾಧಾ ಚಿಕ್ಕಮಗಳೂರು

ಕರ್ನಾಟಕ ಸರ್ಕಾರಿ ಸೇವಾ (ಕುಟುಂಬ ನಿವೃತ್ತಿವೇತನ) ನಿಯಮಗಳು 2002ರ ನಿಯಮ 9 ಡಿ ಪ್ರಕಾರ; ವಿಧವೆ ಪುನರ್ವಿವಾಹವಾದರೆ ಆ ದಿನಾಂಕದ ನಂತರ ಅವಳ ಹೆಣ್ಣುಮಗುವಿಗೆ 21 ವರ್ಷ ಪೂರ್ಣವಾಗುವವರೆಗೂ ಈ ಕುಟುಂಬ ನಿವೃತ್ತಿವೇತನವನ್ನು ಮಂಜೂರು ಮಾಡಬಹುದೆಂದು ತಿಳಿಸಲಾಗಿದೆ. ಆದ್ದರಿಂದ ನೀವು ನೇಮಕಾತಿ ಪ್ರಾಧಿಕಾರಕ್ಕೆ ನಮೂನೆ ಎಫ್​ನಲ್ಲಿ ಈ ಬಗ್ಗೆ ಮಾಹಿತಿ ನೀಡಿ, ನಿಮ್ಮ ಮಗುವಿಗೆ ಈ ಪಿಂಚಣಿ ಲಭ್ಯವಾಗುವಂತೆ ಮಾಡಬಹುದು. 

ನೂತನ ಪಿಂಚಣಿ ಯೋಜನೆ

ನೂತನ ಪಿಂಚಣಿ ಯೋಜನೆ

  ವಿಜಯವಾಣಿ ಸುದ್ದಿಜಾಲ


 ಲ. ರಾಘವೇಂದ್ರ

ಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಸರ್ಕಾರಿ ನೌಕರನು ಸೇವಾ ಕಾನೂನಿನ ಚೌಕಟ್ಟಿಗೆ ಒಳಗಾಗಿ ಕೆಲಸ ಮಾಡಬೇಕಾಗುತ್ತದೆ. ಈ ರೀತಿಯಾಗಿ 25-35 ವರ್ಷ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತನಾಗುವ ನೌಕರನಿಗೆ ಸರ್ಕಾರವು ಈ ಹಿಂದೆ ನಿಶ್ಚಿತ ಪಿಂಚಣಿ ಸೌಲಭ್ಯ ನೀಡುತ್ತಿತ್ತು. ಈ ರೀತಿ ಪಿಂಚಣಿ ಸೌಲಭ್ಯ ಪಡೆಯುತ್ತಿರುವ ಸರ್ಕಾರಿ ನೌಕರರಲ್ಲಿ ಒಂದು ಜೀವನದ ಭದ್ರತೆ ಉಂಟಾಗುತ್ತಿತ್ತು. ಈ ರೀತಿಯ ಜೀವನ ಭದ್ರತೆಗೆ ಒಳಗಾಗಿರುವ 5.8 ಲಕ್ಷ ಪಿಂಚಣಿದಾರರು ಇಂದು ನಮ್ಮ ರಾಜ್ಯದಲ್ಲಿದ್ದಾರೆ.

ಸರ್ವೇಚ್ಛ ನ್ಯಾಯಾಲಯವು ‘ಪಿಂಚಣಿ ಎಂಬುದು ನೌಕರರಿಗೆ ನೀಡುವ ಭಿಕ್ಷೆಯಲ್ಲ ನೌಕರರು ದೀರ್ಘಾವಧಿ ಮಾಡಿದ ಸೇವೆ ಹಾಗೂ ಸೇವಾವಧಿಯಲ್ಲಿ ನೌಕರನು ಪಡೆದ ಜೀವನಾವಶ್ಯಕ ವೇತನಕ್ಕಿಂತ ಕಡಿಮೆ ವೇತನ ಪಿಂಚಣಿಯ ರೂಪದಲ್ಲಿ ಇಳಿವಯಸ್ಸಿನಲ್ಲಿ ಸಾಮಾಜಿಕ ಆರ್ಥಿಕ ಭದ್ರತೆಗಾಗಿ ನೀಡುವಂತದ್ದು. ಇದನ್ನು ಮುಂದೂಡಿದ ವೇತನವೆಂದು ಅರ್ಥೈಸಿದೆ. ಇದು ಮೂಲಭೂತ ಹಕ್ಕೆಂದು ಪರಿಗಣಿಸುವಂತೆ ಹೇಳಿದೆ. (ಎಐಆರ್-1983-ಎಸ್​ಸಿ-130) ಈ ರೀತಿ ನಿಶ್ಚಿತ ಪಿಂಚಣಿ ವ್ಯವಸ್ಥೆ ಬದಲಿಸಿದ ಕೀರ್ತಿ ಹಿಂದಿನ ಎನ್​ಡಿಎ ಸರ್ಕಾರಕ್ಕೆ ಸಲ್ಲುತ್ತದೆ. ಈ ನಿಶ್ಚಿತ ಪಿಂಚಣಿಯನ್ನು ಅಂಶದಾಯಿಕ ಪಿಂಚಣಿ ಯೋಜನೆಯಾಗಿ ಅಳವಡಿಸಿಕೊಳ್ಳಲು ಹಾಗೂ ವಿಶ್ವಬ್ಯಾಂಕಿನಿಂದ ಸಾಲ ದೊರಕಿಸಿಕೊಳ್ಳಲು ಅಧಿಕಾರದ ಚುಕ್ಕಾಣಿ ಹಿಡಿದ ಸರ್ಕಾರಗಳು ಮಾಡಿದ ಷಡ್ಯಂತ್ರವಾಗಿದೆ. ಈ ಯೋಜನೆಯು ಸಾಫಲ್ಯಕ್ಕಿಂತ ಇಂದು ವಿಫಲತೆಯೇ ಜಾಸ್ತಿಯಾಗಿದೆ.

ಸ್ವಾತಂತ್ರ್ಯೊತ್ತರ ಭಾರತದಲ್ಲಿ ಸರ್ಕಾರಿ ನೌಕರರು ಹಲವು ಬದಲಾವಣೆಗಳನ್ನು ಕಂಡಿದ್ದಾರೆ. ವೇತನದಲ್ಲಿ 6ಕ್ಕೆ ಏರದ 3ಕ್ಕೆ ಇಳಿಯದ ಸ್ಥಿತಿಯಲ್ಲಿದ್ದರೂ ಸರ್ಕಾರ ನೀಡುವ ನಿಶ್ಚಿತ ಪಿಂಚಣಿ ಸೌಲಭ್ಯದಿಂದಾಗಿ ಇಳಿವಯಸ್ಸಿನಲ್ಲಿ ಗೌರವಯುತ ಬಾಳ್ವೆ ನಡೆಸಬಹುದೆಂಬ ಆಶಾಭಾವನೆಯು ಯುವ ಜನಾಂಗವನ್ನು ಸರ್ಕಾರಿ ನೌಕರಿಯ ಕಡೆ ಆಕರ್ಷಿಸುತ್ತಿತ್ತು. ಆದರೆ ಇಂದು ಸರ್ಕಾರಿ ನೌಕರಿಗೆ ಸೇರುವವರಿಗೆ ಪಿಂಚಣಿ ಇಲ್ಲ ಎಂಬ ಕಹಿ ಸತ್ಯ ನಮ್ಮ ಮುಂದಿದೆ. ದಿನಾಂಕ 1-4-2004ರಿಂದ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ನೂತನ ಅಂಶದಾಯಿ ಪಿಂಚಣಿಯೋಜನೆ ಜಾರಿಗೆ ತಂದಿತು. ಈ ಯೋಜನೆಯನ್ನೇ ಅಂದು ಅಧಿಕಾರದಲ್ಲಿದ್ದ ಸರ್ಕಾರವು ದಿನಾಂಕ 1-4-2006ರಿಂದ ಕೇಂದ್ರ ಸರ್ಕಾರದ ಯೋಜನೆಯನ್ನೇ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ದಿನಾಂಕ 31-3-2006ರ ಸರ್ಕಾರದ ಆದೇಶ ಸಂಖ್ಯೆ ಎಫ್​ಡಿ (ವಿಶೇಷ) 4 ಪಿಇಟಿ 2005ರ ಮೇರೆಗೆ ಅನುಷ್ಠಾನಗೊಳಿಸಿತು. ದಿನಾಂಕ 1-4-2000ದ ನಂತರ ಹೊಸದಾಗಿ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ಹೊಸದಾಗಿ ವ್ಯಾಖ್ಯಾನಿಸಿದ ಅಂಶದಾಯಿ ಕೊಡುಗೆ ನಿವೃತ್ತಿವೇತನ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೆ ತಂದಿದೆ. ಆದರೆ ಈ ಹಿಂದೆ ಸರ್ಕಾರಿ ಸೇವೆಯಲ್ಲಿದ್ದು ತದನಂತರ ತತ್ಸಮಾನ ಅಥವಾ ಮೇಲಿನ ಹುದ್ದೆಗೆ ಆಯ್ಕೆ ಪ್ರಾಧಿಕಾರಗಳ ಮೂಲಕ ಬೇರೊಂದು ಹುದ್ದೆಗೆ ಆಯ್ಕೆಯಾಗಿ ನಿಯೋಜಿತರಾದರೆ ಅಂತಹವರಿಗೆ ಹಿಂದಿನ ನಿಶ್ಚಿತ ಪಿಂಚಣಿ ಯೋಜನೆ ಅಳವಡಿಸಿಕೊಳ್ಳಲು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 224ಬಿ ರೀತ್ಯಾ 3 ವರ್ಷದೊಳಗೆ ತಮ್ಮ ಐಚ್ಛಿಕತೆ ನೀಡಲು ಅವಕಾಶ ಕಲ್ಪಿಸಲಾಗಿದೆ. 2-2-2013ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಅನಂತರ ನೇಮಕವಾದರೆ ನೇಮಕ ಪ್ರಾಧಿಕಾರಗಳು ಸೂಕ್ತ ಆದೇಶ ಹೊರಡಿಸುವ ಮುನ್ನ ಕ್ಲೇಮ್ ಸಮರ್ಥಿಸುವ ಸೂಕ್ತ ದಾಖಲೆಗಳನ್ನೇ ಸರ್ಕಾರದ ಅನುಮೋದನೆ ಪಡೆಯಬೇಕೆಂದು ದಿನಾಂಕ 30-10-2012ರ ಸರ್ಕಾರದ ಅಧಿಸೂಚನೆ ಸಂಖ್ಯೆ ಎಫ್​ಡಿ06ಎಸ್​ಆರ್​ಎ2012ರಲ್ಲಿ ತಿಳಿಸಿದೆ. ಅಲ್ಲದೆ ಈ ಯೋಜನೆಯನ್ನು ದಿನಾಂಕ 30-1-2014ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ(ವಿಶೇಷ) 219 ಪಿಇಎನ್ 2012ರ ಮೇರೆಗೆ ಸರ್ಕಾರದ ಸ್ವಾಯತ್ತ ಸಂಸ್ಥೆಗಳಾದ ಮಂಡಳಿ ನಿಗಮಗಳು, ವಿವಿಗಳು, ರಾಜ್ಯದಿಂದ ಅನುದಾನಿತ ಪಡೆದ ಸಂಸ್ಥೆಗಳು ಹಾಗೂ ಸ್ವಾಯತ್ತ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ದಿನಾಂಕ 26-12 ಸರ್ಕಾರಿ ಆದೇಶ ಸಂಖ್ಯೆ ಸಕಇ 352, ಮೋದೇಶಾ 2016 ಮೇರೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾಯಂ ಸಿಬ್ಬಂದಿಗಳಿಗೆ ಈ ಹೊಸ ಪಿಂಚಣಿ ಯೋಜನೆ ಅನುಷ್ಠಾನಗೊಳಿಸಲು ಅನುಮೋದನೆ ನೀಡಿದೆ. ಹೀಗೆ ರಾಜ್ಯ ಸರ್ಕಾರದ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಈ ಹೊಸ ಪಿಂಚಣಿ ಯೋಜನೆಗೆ ಸುಮಾರು 1.80 ಲಕ್ಷದಷ್ಟು ನೌಕರರು ಸೇರ್ಪಡೆಯಾಗಿದ್ದಾರೆ.

*ನೂತನ ಪಿಂಚಣಿ ಯೋಜನೆ ಏನು?*

ದಿನಾಂಕ 16-6-2007ರ ಸರ್ಕಾರಿ ಆದೇಶ ಸಂಖ್ಯೆ 79 ಟಿಎಆರ್ 2006ರ ಮೇರೆಗೆ ಸರ್ಕಾರಿ ನೌಕರನ ಮೂಲವೇತನದ ಮತ್ತು ಅದರ ಮೇಲೆ ದೊರೆಯುವ ತುಟ್ಟಿಭತ್ಯೆಯು ಸೇರಿ ಈ ನೂತನ ಅಂಶದಾಯಿ ಪಿಂಚಣಿ ಯೋಜನೆಯಡಿಯಲ್ಲಿ ಪಿಂಚಣಿ ನೀಡುವ ಉದ್ದೇಶಕ್ಕಾಗಿ ನೌಕರರ ವೇತನದಿಂದ ಶೇ.10ರಷ್ಟು ಕಠಾವು ಮಾಡಬೇಕೆಂದು ಸೂಚಿಸಲಾಗಿದೆ. ಹೀಗೆ ಶೇಖರಣೆಗೊಳ್ಳುವ ಮೊತ್ತವನ್ನು ವಿವಿಧ ಖಾಸಗಿ ಹಣಕಾಸಿನ ಮೂಲಕ ಷೇರು ಮಾರುಕಟ್ಟೆಯಲ್ಲಿ ತೊಡಗಿಸಲಾಗುತ್ತದೆ. 30-35 ವರ್ಷಗಳ ನಂತರ ಈ ಹಣ ಬಳಸಿದ ಕಂಪನಿಗಳು ಷೇರುಮಾರುಕಟ್ಟೆಯ ಏರಿಳಿತ ಆಧರಿಸಿ ಸದರಿ ಮೊತ್ತಕ್ಕೆ ಬಂದ ಲಾಭಾಂಶದಲ್ಲಿ ಪಿಂಚಣಿಯನ್ನು ನೌಕರರಿಗೆ ನೀಡುತ್ತದೆಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ಹೇಳುತ್ತದೆ ಎಂದರೆ ಸರ್ಕಾರಿ ನೌಕರನು ಪಡೆಯುವ ಪಿಂಚಣಿ ಮೊತ್ತವು ಸದರಿ ಕಂಪನಿಗಳ ಲಾಭಾ ನಷ್ಟಗಳ ಮೇಲೆ ನಿರ್ಧಾರಿತವಾಗಿರುತ್ತದೆ. ಇದಕ್ಕಾಗಿ ಕಾನೂನುಗಳನ್ನು ರಚಿಸದೆ ನೌಕರರು ಹಾಗೂ ಸರ್ಕಾರ ತೊಡಗಿಸುವ ಹಣಕ್ಕೆ ಯಾವುದೇ ಭದ್ರತೆ ನೀಡದೆ ಈ ಹೊಸ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರವು 2004ರಲ್ಲಿ ಘೊಷಿಸಿದೆ. ಕೇಂದ್ರ ಸರ್ಕಾರವು 2003ರ ಆಗಸ್ಟ್​ನಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಏಜೆನ್ಸಿ ಸಂಸ್ಥೆಯನ್ನು ಕೇವಲ ಒಂದು ಕಾರ್ಯಾದೇಶದ ಮೂಲಕ ರಚಿಸಿದರೂ ಕೆಲವು ಸಂವೇದನಾಶೀಲ ಜನಪ್ರತಿನಿಧಿಗಳ ಹಾಗೂ ನೌಕರರ ಸಂಘಟನೆಗಳು ಇದರ ಜಾರಿ ವಿರೋಧಿಸುತ್ತಿದ್ದುದರಿಂದ 10 ವರ್ಷಗಳ ಕಾಲ ಇದಕ್ಕೆ ಸಂಸತ್ತಿನ ಅಂಗೀಕಾರ ಪಡೆಯಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ 2013ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕಾಯ್ದೆಯನ್ನು ಸಂಸತ್ ಅನುಮೋದಿಸಿದೆ. ಈವರೆಗೂ ಈ ಹೊಸ ಪಿಂಚಣಿಯೋಜನೆಗೆ ಯಾವುದೇ ಅಧಿನಿಯಮ ಇಲ್ಲದೆ ಕೇವಲ ಕಾರ್ಯಾದೇಶಗಳ ಮೂಲಕ ಜಾರಿಗೆ ತರಲಾಗಿದೆ. ಇಂತಹ ಒಂದು ಕಾರ್ಯಾದೇಶವನ್ನು ಬಾಧಿತ ಸರ್ಕಾರಿ ನೌಕರರು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಇಂತಹ ಹೊಸ ಪಿಂಚಣಿ ಯೋಜನೆ ಊರ್ಜಿತವಾಗುವುದು ಕಷ್ಟ. 2006ರ ನಂತರ ರಾಜ್ಯ ಸರ್ಕಾರಿ ಕೆಲಸಕ್ಕೆ ಸೇರಿದ ನೌಕರರು ತಮ್ಮ ಹಿರಿಯ ಸಹೋದ್ಯೋಗಿಗಳಿಗಿಂತ ಶೇ.10ರಷ್ಟು ಕಡಿಮೆ ವೇತನವನ್ನು ಈ ಕಠಾವಿನಿಂದಾಗಿ ಪಡೆಯುವ ಅವಕಾಶವಾಗಿದೆ.

(ಮುಂದುವರೆಯುವುದು…..)

ಆದಾಯ ತೆರಿಗೆ ಪರಿಷ್ಕೃತ ನಿಯಮಗಳು




ಶಾಲಾ ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಬಗ್ಗೆ


ಅನುಕಂಪದ ಆಧಾರದ ಮೇಲೆ

ಸರ್ಕಾರಿ ಕಾರ್ನರ್‌ Friday, 31.08.2018, 3:00 AM       ವಿಜಯವಾಣಿ ಸುದ್ದಿಜಾಲ ದಿನದ ಪ್ರಶ್ನೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ನನ್ನ ತಂದೆ ಸೇವೆ...